ಇದೇನಾದರೂ ಸಂಭವಿಸಿದರೆ ದೀಪಾವಳಿ ಹಬ್ಬಕ್ಕೆ ಪೆಟ್ರೋಲ್​-ಡಿಸೇಲ್ ದರದಲ್ಲಿ 2-3 ರೂ. ಇಳಿಕೆ!

petrol diesel price may drop
Published on

ನವದೆಹಲಿ: ಇಂದನ ಬೆಲೆ ಏರಿಕೆಯಿಂದ ಜನರು ಸಂಪೂರ್ಣವಾಗಿ ತತ್ತರಿಸಿದ್ದು, ಜನರು ತಮ್ಮ ತಮ್ಮ ವಾಹನಗಳಿಗೆ ಪೆಟ್ರೋಲ್ (Petrol)​ ಅಥವಾ ಡಿಸೇಲ್ (Diesel) ಹಾಕಿಸಲು ಹಿಂದೆ-ಮುಂದೆ ಯೋಚಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 102 ರೂ. ಇದ್ದರೆ, ಡಿಸೇಲ್​ 88.94 ರೂ. ಇದೆ. ಹೀಗಿರುವಾಗಲೇ ಹೊಸ ವರದಿಯೊಂದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ದೀಪಾವಳಿ ಹಬ್ಬಕ್ಕೆ ಇಂಧನ ಬೆಲೆಯಲ್ಲಿ ಇಳಿಕೆ ಕಾಣಲಿದೆ ಎಂದು ಹೇಳಲಾಗಿದೆ. ಅಸಲಿಗೆ ಇತ್ತೀಚಿನ ವರದಿ ಹೇಳೋದೇನು? 2ರಿಂದ 3 ರೂ. ಇಳಿಕೆಯಾಗಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಹೀಗಿದೆ.

ಪ್ರಸ್ತುತ ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2-3 ರೂ.ಗಳಷ್ಟು ಕಡಿತಗೊಳ್ಳಬಹುದು ಎಂದು ಐಸಿಆರ್​ಎ (ICRA) ಮಾಹಿತಿ ಹಂಚಿಕೊಂಡಿದೆ. ತೈಲ ಕಂಪನಿಗಳ ಮಾರ್ಕೆಟಿಂಗ್ ಮಾರ್ಜಿನ್​ಗಳು ಕಡಿಮೆ ಕಚ್ಚಾ ಬೆಲೆಗಳಿಂದಾಗಿ ಇತ್ತೀಚೆಗೆ ಸುಧಾರಿಸಿದೆ. ಇದರಿಂದ ಬೆಲೆ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದೇ ಹೇಳಲಾಗಿದೆ. ಐಸಿಆರ್​ಎ ಹೇಳುವ ಪ್ರಕಾರ, ಕಳೆದ ಮಾರ್ಚ್​ನಿಂದ ಈಗಿರುವ ಪೆಟ್ರೋಲ್​ ಮತ್ತು ಡಿಸೇಲ್​ ದರದಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ. ಸದ್ಯ ಕಚ್ಚಾ ಬೆಲೆಗಳು ಸ್ಥಿರವಾಗಿದ್ದರೆ, ಇಂಧನ ದರದಲ್ಲಿ ಇಳಿಕೆ ಕಾಣಬಹುದು ಎಂದು ಸೂಚಿಸಲಾಗಿದೆ.

petrol diesel price drop

ವರದಿಗಳ ಪ್ರಕಾರ ಪೆಟ್ರೋಲ್ ಮತ್ತು ಡಿಸೇಲ್​ ದರದಲ್ಲಿ 2-3 ರೂ. ಇಳಿಕೆ ಕಂಡುಬಂದರೆ ವಾಹನ ಸವಾರರು ನಿಟ್ಟುಸಿರು ಬಿಡುವುದಂತು ಸತ್ಯ. ಇಂದಿನ ಕಾಲಘಟ್ಟಕ್ಕೆ ಎಲೆಕ್ಟ್ರಿಕ್​ ಬೈಕ್​, ಕಾರುಗಳು ಖರೀದಿ ಜೋರಾಗಿದ್ದು, ಜನಸಾಮಾನ್ಯರು ಇವಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇವಿ ವಾಹನಗಳೇ ರಸ್ತೆಗಳ ತುಂಬ ಸಂಚರಿಸಲು ಪ್ರಾರಂಭಿಸಿದರೆ ಮುಂದಿನ ದಿನಗಳಲ್ಲಿ ಇಂಧನ ಬೆಲೆ ದಿಢೀರ್ ಕುಸಿತ ಕಾಣುವುದರಲ್ಲಿ ಯಾವುದೇ ಅಚ್ಚರಿಯಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net