ಬೆಂಗಳೂರು:
ಪೆಟ್ರೋಲ್ ಡಿಸೇಲ್ ಮೇಲೆ ಕೇಂದ್ರ ಸರ್ಕಾರ ಹಾಕಿರುವ ಮಾರಾಟ ತೆರಿಗೆ ದರ ಕಡಿಮೆ ಮಾಡಲು ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವಂತೆ ಮೇಲ್ಮೆನೆಯಲ್ಲಿ ಆಡಳಿತ ಪಕ್ಷದ ಸದಸ್ಯ ಯು.ಬಿ.ವೆಂಕಟೇಶ್ ಒತ್ತಾಯಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲೆ ದರ ಕಡಿಮೆ ಮಾಡಿಲ್ಲ. ಆದ್ದರಿಂದ ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದರು.
ಇದಕ್ಕೆ ಸಿಎಂ ಪರವಾಗಿ ಲಿಖಿತ ಉತ್ತರ ನೀಡಿದ ಸಭಾನಾಯಕ ಬೋಸರಾಜು, ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವ ಯಾವ ವರ್ಷಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಲಾಗಿದೆ ಎನ್ನುವ ವಿವರ ನೀಡಿದರು.
ಬೆಂಗಳೂರಿನಲ್ಲಿ ಮಾರಾಟ ದರ ತೆರಿಗೆ ಸೇರಿ ಪೆಟ್ರೋಲ್ ದರ - 102.88 ರೂ ಇದೆ. ತಮಿಳುನಾಡು - 102.84, ಕೇರಳ - 106.66, ಆಂದ್ರ - 109.44, ತೆಲಂಗಾಣ - 107. 40, ಮಹಾರಾಷ್ಟ್ರ - 104.46 ಇದೆ ಎಂದರು.
2019 -20 ನೇ ಸಾಲಿನಲ್ಲಿ ಪೆಟ್ರೋಲ್ ದರದ ಮೇಲೆ ಶೇ.28.75 ರಿಂದ 32 ಕ್ಕೆ ಹಾಗೂ ಡೀಸೆಲ್ ಮೇಲೆ ಶೇ.17.73 ದರ ಹೆಚ್ಚಳ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರ ದರ ಏರಿಕೆ ಮಾಡಿರುವುದರಿಂದ ಮುಂಬರುವ 9 ತಿಂಗಳಲ್ಲಿ 3107 ಕೋಟಿ ರೂ ಹೆಚ್ಚಿನ ಆದಾಯ ನಿರೀಕ್ಷಿಎಲಾಗಿದೆ ಎಂದರು.
ರಾಜ್ಯದ ಮನವಿಗೆ ಕೇಂದ್ರ ಸ್ಪಂದಿಸಿಲ್ಲ ಎಂದು ಬೋಸ್‌ರಾಜ್ ಹೇಳಿದಾಗ, ಬಿಜೆಪಿ ಸದಸ್ಯೆ ಭಾರತಿಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.