ಕುರಾನ್ ಪದ್ಯಗಳನ್ನು ತೆಗೆಯಲು ಕೋರಿದ್ದ ಅರ್ಜಿ ವಜಾ

Court
Published on

ನವದೆಹಲಿ : ಇಸ್ಲಾಂ ಧರ್ಮದ ಪವಿತ್ರ ಗ್ರಂಥವಾದ ಖುರಾನ್​​ನಿಂದ ಕೆಲವು ಪದ್ಯಗಳನ್ನು ತೆಗೆದುಹಾಕಲು ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯೊಂದನ್ನು ಇಂದು ಸುಪ್ರೀಂ ಕೋರ್ಟ್ ದಂಡ ವಿಧಿಸಿ ವಜಾಗೊಳಿಸಿದೆ.

ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡ್​ ಮಾಜಿ ಅಧ್ಯಕ್ಷ ಸೈಯೆದ್​ ವಾಸಿಮ್ ರಿಜ್ವಿ ಅವರು ಸಲ್ಲಿಸಿದ್ದ ಈ ಅರ್ಜಿಯಲ್ಲಿ ಖುರಾನಿನ 26 ಶ್ಲೋಕಗಳನ್ನು ತೆಗೆದುಹಾಕಬೇಕು ಎಂದು ಕೋರಲಾಗಿತ್ತು. "ಕೆಲವು ಪದ್ಯಗಳ ಅಕ್ಷರಶಃ ವ್ಯಾಖ್ಯಾನವು ನಂಬಿಕೆಯಿಲ್ಲದವರ ವಿರುದ್ಧ ಹಿಂಸಾಚಾರವನ್ನು ಬೋಧಿಸುತ್ತದೆ. ಆದ್ದರಿಂದ ಸದರಿ ಪದ್ಯಗಳನ್ನು ಮದರಸಾಗಳಲ್ಲಿ ಮಕ್ಕಳಿಗೆ ಹೇಳಿಕೊಡುವುದನ್ನು ನಿಲ್ಲಿಸಬೇಕು" ಎಂದು ಅರ್ಜಿದಾರರ ವಕೀಲ ಆರ್​.ಕೆ.ರಾಯ್ಜಾದ ಹೇಳಿದರು.

ಈ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿ ಆರ್​.ಎಫ್​.ನಾರಿಮನ್ ಅವರು, "ಇದು ಸಂಪೂರ್ಣವಾಗಿ ಕ್ಷುಲ್ಲಕವಾದ ರಿಟ್ ಅರ್ಜಿಯಾಗಿದೆ" ಎಂದು ಹೇಳಿ ವಜಾ ಮಾಡಿದರು. ಜೊತೆಗೆ ಅರ್ಜಿದಾರರಿಗೆ 50,000 ರೂ. ವೆಚ್ಚವನ್ನು ವಿಧಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net