More

    ಪ್ರಧಾನಿ ಮೋದಿ ವಿರುದ್ಧ ಸಿಬಿಐ ತನಿಖೆ ಕೋರಿ ಪಿಐಎಲ್

    ನವದೆಹಲಿ : ರಫೇಲ್ ಯುದ್ಧ ವಿಮಾನಗಳ ಮಾರಾಟದಲ್ಲಿ ಫ್ರ್ಯಾನ್ಸ್​​ನ ಡಸಾಲ್ಟ್ ಏವಿಯೇಷನ್ ಕಂಪೆನಿ ಭಾರತೀಯ ಮಧ್ಯವರ್ತಿಗಳಿಗೆ ಲಂಚ ಕೊಟ್ಟಿದೆ ಎಂಬ ಆರೋಪ ಇತ್ತೀಚೆಗೆ ಫ್ರೆಂಚ್​ ನ್ಯೂಸ್ ಪೋರ್ಟಲ್​ ಒಂದರಲ್ಲಿ ಮೂಡಿಬಂದಿತ್ತು. ಇದೇ ಹಿನ್ನೆಲೆಯಲ್ಲಿ ರಫೇಲ್ ವಿಮಾನಗಳ ಖರೀದಿಯ ಬಗ್ಗೆ ಸಿಬಿಐ ತನಿಖೆ ಆದೇಶಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯೊಂದು ಸುಪ್ರೀಂ ಕೋರ್ಟ್​​ನಲ್ಲಿ ದಾಖಲಾಗಿದೆ.

    ಸುಪ್ರೀಂ ಕೋರ್ಟ್ ವಕೀಲ ಮನೋಹರ್ ಲಾಲ್ ಶರ್ಮ ಅವರು ಏಪ್ರಿಲ್ 6 ರಂದು ದಾಖಲು ಸಲ್ಲಿಸಿರುವ ಈ ರಿಟ್ ಅರ್ಜಿಯಲ್ಲಿ ಭಾರತ ಸರ್ಕಾರವು ಡಸಾಲ್ಟ್​ ಏವಿಯೇಷನ್​​ನೊಂದಿಗೆ 36 ಫೈಟರ್​ ಜೆಟ್​ಗಳನ್ನು ಖರೀದಿಸಲು ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಗೊಳಿಸಲು ಕೋರಲಾಗಿದೆ. ಫ್ರ್ಯಾನ್ಸ್​​ನ ಆ್ಯಂಟಿ ಕರಪ್ಷನ್ ಏಜೆನ್ಸಿ ಈ ಒಪ್ಪಂದದಲ್ಲಿ 1 ಬಿಲಿಯನ್​ ಯೂರೋಗಳ ಲಂಚ ನೀಡಲಾಗಿದೆ ಎಂದು ತನಿಖಾ ವರದಿ ನೀಡಿದೆ ಎಂದು ಶರ್ಮ ಹೇಳಿದ್ದಾರೆ.

    ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಉಲ್ಟಾ ಹೊಡೆದ ಯುವತಿ

    ರಫೇಲ್ ಒಪ್ಪಂದವು ಭ್ರಷ್ಟಾಚಾರದ ಫಲಿತಾಂಶವಾಗಿದ್ದು, ರಾಜಕೀಯ ಒತ್ತಡದಿಂದಾಗಿ ಈ ಬಗ್ಗೆ ಯಾವುದೇ ತನಿಖೆಯಾಗುತ್ತಿಲ್ಲ ಎಂದಿರುವ ಶರ್ಮ, ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಸಾಲ್ಟ್ ರಿಲೆಯನ್ಸ್ ಏರೋಸ್ಪೇಸ್ ಲಿಮಿಟೆಡ್​ ವಿರುದ್ಧ ಎಫ್​​.ಐ.ಆರ್​. ದಾಖಲಿಸಿ ಸಿಬಿಐ ತನಿಖೆ ನಡೆಸಲು ಆದೇಶಿಸಬೇಕೆಂದು ಕೋರಿದ್ದಾರೆ.

    ಈ ಅರ್ಜಿಯ ವಿಚಾರಣೆಯನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕೆಂದು ಖುದ್ದು ವಕೀಲರಾದ ಶರ್ಮ ಇಂದು ಮುಖ್ಯ ನ್ಯಾಯಮೂರ್ತಿ ಎಸ್​​.ಎ.ಬೊಬ್ಡೆ ಅವರ ಮುಂದೆ ಉಲ್ಲೇಖಿಸಿದರು. ನ್ಯಾಯಮೂರ್ತಿ ಬೊಬ್ಡೆ ಅವರು ನಿಯಮಾನುಸಾರವಾಗಿ ಎರಡು ವಾರಗಳ ನಂತರ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದರು. (ಏಜೆನ್ಸೀಸ್)

    ಹತ್ತಿಯ ಬದಲಿಗೆ ಬಳಸಿದ ಮಾಸ್ಕ್​ಗಳನ್ನು ತುಂಬುತ್ತಿದ್ದ ಮ್ಯಾಟ್ರೆಸ್​​ ಫ್ಯಾಕ್ಟರಿ !

    ಕರೊನಾ ಲಸಿಕೆ : ಅತಿ ವೇಗದಲ್ಲಿ 10 ಕೋಟಿ ಡೋಸ್​ ನೀಡಿರುವ ಭಾರತ !

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts