ಕಂಗನಾ ಪೋಸ್ಟ್​ಗಳನ್ನು ಸೆನ್ಸಾರ್​ ಮಾಡಿ ಎಂದು ಅರ್ಜಿ! ನಟಿಯ ಪ್ರತಿಕ್ರಿಯೆ ಹೀಗಿತ್ತು

kanganaran
Published on

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ಅವರ ಭವಿಷ್ಯದ ಸಾಮಾಜಿಕ ಮಾಧ್ಯಮದ ಪೋಸ್ಟ್​ಗಳನ್ನು ಸೆನ್ಸಾರ್​ ಮಾಡಬೇಕು ಎಂದು ಕೇಳಿರುವ ರಿಟ್​ ಅರ್ಜಿಯೊಂದು ಸುಪ್ರೀಂ ಕೋರ್ಟ್​ನಲ್ಲಿ ದರ್ಜಾಗಿದೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, "ಹಹ್ಹಹ್ಹಾ... ಈ ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆ" ಎಂದು ಕಾಮೆಂಟ್​ ಮಾಡಿದ್ದಾರೆ.

ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಂಗನಾರ ಎಲ್ಲಾ ಭವಿಷ್ಯದ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳನ್ನು ಸೆನ್ಸಾರ್​ ಮಾಡಬೇಕು ಎಂದು ಮುಂಬೈ ನಿವಾಸಿಯೊಬ್ಬರು ಕೋರಿದ್ದಾರೆ. ಜೊತೆಗೇ, ಅವರ ವಿರುದ್ಧ ವಿವಿಧೆಡೆಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್​ಐಆರ್​ಗಳನ್ನೂ ಮುಂಬೈನ ಖಾರ್​ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು ಎಂದಿದ್ದಾರೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net