ಅರ್ಥಹೀನ ಪಿಐಎಲ್ ಸಲ್ಲಿಸಿ ಕೋರ್ಟ್ ಸಮಯ ಹಾಳು : ಅರ್ಜಿದಾರರಿಗೆ 1 ಲಕ್ಷ ರೂ ದಂಡ

highcourt
Published on

ಬೆಂಗಳೂರು: ವ್ಯಕ್ತಿಯೋರ್ವ ತಾನು ರಚಿಸಿರುವ ಕರ್ನಾಟಕ ಸರ್ಕಾರ ಪರಿವರ್ತನಾ ಮಸೂದೆ-2025 ಜಾರಿಗೆ ತರುವ ಬಗ್ಗೆ ಚರ್ಚಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ರಾಜಕೀಯ ಅರ್ಥಶಾಸ್ತೃಜ್ಞ ಎಂದು ಹೇಳಿಕೊಂಡು ಮುರಳಿಕೃಷ್ಣ ಬ್ರಹ್ಮಾನಂದಂ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠ, ಈ ತರನಾಗಿ ಅರ್ಥಹೀನ ಅರ್ಜಿ ಸಲ್ಲಿಸುವ ಮೂಲಕ ಅರ್ಜಿದಾರರು ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಾರೆ. ಇದು ಒಪ್ಪುವಂತದ್ದಲ್ಲ ಎಂದು ಅಸಮಾಧಾನ ಹೊರಹಾಕಿದೆ.

ಅರ್ಜಿಯನ್ನು ವಿಚಾರಣೆಗೊಳಪಡಿಸಲಿದೆ. ಹಾಗಂದ ಮಾತ್ರಕ್ಕೆ ಗಂಭೀರತೆಯಿಲ್ಲದ ಮನವಿಯೊಂದಿಗೆ ಅರ್ಜಿ ಸಲ್ಲಿಸುವುದು ಸಲ್ಲ. ನಿಮ್ಮಲ್ಲಿ ಉತ್ತಮ ವಿಚಾರಗಳಿರಬಹುದು. ಆದರೆ, ಅದನ್ನು ಸಾರ್ವಜನಕಿ ಹಿತಾಸಕ್ತಿ ಮೊಕದ್ದಮೆಯಾಗಿ ಬದಲಾಯಿಸಲಾಗದು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ತಾವು ರಚಿಸಿರುವ ಕರ್ನಾಟಕ ಸರ್ಕಾರ ಪರಿವರ್ತನಾ ಮಸೂದೆ-2025 ಜಾರಿಗೆ ತರುವ ಬಗ್ಗೆ ಚರ್ಚಿಸಲು ಎ್ಲ 34 ಸಚಿವಾಲಯಗಳು, 44 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಬೇಕು. ಅಲ್ಲದೆ, ಕರ್ನಾಟಕ ಸರ್ಕಾರ ಪರಿವರ್ತನಾ ಮಸೂದೆ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವಂತೆ ಸಿಎಂ ಅವರ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚನೆ ನೀಡಬೇಕು. ಮಾತ್ರವಲ್ಲದೆ, ಈ ಮಸೂದೆ ಜಾರಿಗೆ ತರುವಂತೆ ಒತ್ತಾಯಿಸಲು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ಸೂಚಿಸಲು ಕೆಪಿಸಿಸಿ ಅಧ್ಯಕ್ಷರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net