

ನವದೆಹಲಿ: ದೇಶಾದ್ಯಂತ ನಡೆಯುವ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು(EVM) ಬ್ಯಾಲೆಟ್ ಪೇಪರ್ನೊಂದಿಗೆ ಬದಲಾಯಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ಮಂಗಳವಾರ(ನ.26) ವಜಾಗೊಳಿಸಿದೆ.
ಮತದಾರರಿಗೆ ಚುನಾವಣೆ ಸಮಯದಲ್ಲಿ ಹಣ, ಮದ್ಯ ಹಾಗೂ ಇತರೆ ವಸ್ತುಗಳನ್ನು ವಿತರಿಸಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದು ಸೇರಿದಂತೆ ಇವಿಎಂ ಯಂತ್ರಗಳ ಅಕ್ಷೇಪದ ಕುರಿತು ಕೆ.ಎಲ್ ಪಾಲ್ ಎಂಬುವವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಪಿ.ಬಿ ವರಾಳೆ ಅವರಿದ್ದ ಪೀಠ ವಜಾಗೊಳಿಸಿದೆ.
ಅಲ್ಲದೆ, ''ನೀವು ಗೆದ್ದಾಗ ಮಾತ್ರ ಇವಿಎಂಗಳು ಉತ್ತಮವಾಗಿರುತ್ತವೆ. ಸೋತಾಗ ಟ್ಯಾಂಪರಿಂಗ್ ಮಾಡಲಾಗುತ್ತಿಯೇ ಎಂದು ಕೋರ್ಟ್ ಖಾರವಾಗಿ ಟೀಕಿಸಿದೆ.
ಅರ್ಜಿದಾರ ಪಾಲ್ ಬಗ್ಗೆ ಮಾತನಾಡಿರುವ ಪೀಠ, ಮೂರು ಲಕ್ಷಕ್ಕೂ ಅಧಿಕ ಅನಾಥರ ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಒಂದು ಉತ್ತಮವಾದ ಸಂಸ್ಥೆಯ ಅಧ್ಯಕ್ಷರಾದ್ದಿರಿ. ಇಂತಹ ರಾಜಕೀಯ ವಿಷಯಗಳಗೆ ಏಕೆ ಮುಂದಾಗುತ್ತಿದ್ದಿರಿ ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿದ ಪಾಲ್, ನಾನು 150 ಕ್ಕೂ ಅಧಿಕ ದೇಶಗಳಲ್ಲಿ ಓಡಾಡಿದ್ದೇನೆ. ಬಹುಪಾಲು ದೇಶಗಳು ಬ್ಯಾಲೆಟ್ ಪೇಪರ್ನೊಂದಿಗೆ ಚುನಾವಣೆ ಮಾಡುತ್ತಿವೆ. ನಾವು ಯಾಕೆ ಇದನ್ನೇ ಮುಂದುವರಿಸಬಾರದು ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಪೀಠವು, ಇತರ ದೇಶಗಳಿಗಿಂತ ನಾವೇಕೆ ಭಿನ್ನವಾಗಿರಬಾರದು? ಎಂದು ಮರು ಪ್ರಶ್ನೆ ಹಾಕಿದೆ.
ಅರ್ಜಿದಾರ ಪಾಲ್, ಜೂ.20214ರ ವರದಿ ಉಲ್ಲೇಖಿಸಿ, ಕಳೆದ ಚುನಾವಣೆಯಲ್ಲಿ 9 ಸಾವಿರ ಕೋಟಿ ರೂ ವಶಪಡಿಸಿಕೊಂಡಿದೆ.ಚುನಾವಣೆಯಲ್ಲಿ ಭ್ರಷ್ಟಾಚಾರ ಅತಿರೇಕವಾಗಿದೆ ಎಂದರು. ಪೀಠವು, ನಾವು ಮತ್ತೆ ಭೌತಿಕ (ಬ್ಯಾಲೆಟ್) ಮತ ಪೇಪರ್ಗಳಿಗೆ ಹಿಂತಿರುಗಿದರೆ ಭ್ರಷ್ಟಚಾರ ನಿಲ್ಲುತ್ತದಯೇ? ಎಂದು ಮರು ಪ್ರಶ್ನಿಸಿ, ಅರ್ಜಿಯನ್ನು ತಳ್ಳಿ ಹಾಕಿತು, (ಏಜೆನ್ಸೀಸ್).