ದಸೂಡಿ ಆಸ್ಪತ್ರೆಯಲ್ಲಿ ನರ್ಸ್‌ಗಳಿಲ್ಲದೆ ಪರದಾಟ; ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಕಂಗಾಲು

ಹುಳಿಯಾರು ಹೋಬಳಿಯ ದಸೂಡಿ ಸರ್ಕಾರಿ ಆಸ್ಪತ್ರೆ ಮುಂದೆ ಚಿಕಿತ್ಸೆಗಾಗಿ ನೆರೆದಿರುವ ರೋಗಿಗಳು.
ಹುಳಿಯಾರು ಹೋಬಳಿಯ ದಸೂಡಿ ಸರ್ಕಾರಿ ಆಸ್ಪತ್ರೆ ಮುಂದೆ ಚಿಕಿತ್ಸೆಗಾಗಿ ನೆರೆದಿರುವ ರೋಗಿಗಳು.
Published on

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ದಸೂಡಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟ್ಾ ನರ್ಸ್‌ಗಳಿಲ್ಲದೆ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಿದೆ.

ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು ಧರಣಿ ನಡೆಸುತ್ತಿದ್ದು, 25 ದಿನಗಳಿಂದ ದಸೂಡಿ ಆಸ್ಪತ್ರೆಯ 5 ಮಂದಿ ಸ್ಟ್ಾ ನರ್ಸ್‌ಗಳು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ, ಹೀಗಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಸಿಗದೆ ತೊಂದರೆಯಾಗುತ್ತಿದೆ.

ಆರೋಗ್ಯ ಕೇಂದ್ರದಲ್ಲಿ 24*7 ಆರೋಗ್ಯ ಸೇವೆ ಸಿಗುತ್ತದೆ ಎಂಬ ಬೋರ್ಡ್ ಇದ್ದರೂ, ತುರ್ತು ಸಂದರ್ಭಗಳಲ್ಲಿರಲಿ, ಸಾಮಾನ್ಯ ಸಮಯದಲ್ಲೂ ರಾತ್ರಿ ಅಪಘಾತಕ್ಕೊಳಗಾದವರು, ವಿಷಜಂತು ಕಡಿತಕ್ಕೊಳಗಾದವರು, ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ.

ದಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 16 ಹಳ್ಳಿಗಳಿದ್ದು, ಈ ಹಳ್ಳಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಅಂಥದ್ದರಲ್ಲಿ ಖಾಸಗಿ ವಾಹನ ಪಡೆದು ಆಸ್ಪತ್ರೆಗೆ ಬಂದರೆ ಸಿಬ್ಬಂದಿ ಇರುವುದಿಲ್ಲ. ಇಲ್ಲಿಂದ 10ರಿಂದ 12ಕಿ.ಮೀ.ದೂರದ ಹೊಯ್ಸಲಕಟ್ಟೆ ಹಾಗೂ 25 ಕಿ.ಮೀ. ದೂರದ ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿಯೂ ಯಥಾಸ್ಥಿತಿಯಿದ್ದು, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕಿದೆ ಎಂಬುದು ಗ್ರಾಮಸ್ಥರ ಅಳಲು.

ಹಳ್ಳಿ ಆಸ್ಪತ್ರೆಗಳಲ್ಲಿ ಕನಿಷ್ಠ ತುರ್ತು ಚಿಕಿತ್ಸೆಗಾದರೂ ಒಂದಿಬ್ಬರು ಕಾಯಂ ದಾದಿಯರನ್ನು ನೇಮಕ ಮಾಡಿದ್ದರೆ ನೆರವಾಗುತ್ತಿತ್ತು. ಆದರೆ ನರ್ಸ್‌ಗಳ ಮಾತಿರಲಿ. ಕಾಯಂ ವೈದ್ಯರೂ ಇಲ್ಲಿಲ್ಲ. ಕಂದಿಕೆರೆ, ದಸೂಡಿ ಎರಡೂ ಆಸ್ಪತ್ರೆಗೆ ಒಬ್ಬರೇ ವೈದ್ಯರಿದ್ದು, ಒಂದೆಡೆ ಹೋದರೆ ಮತ್ತೊಂದೆಡೆ ಸಮಸ್ಯೆಯಾಗುತ್ತಿದ್ದು, ಸಮಸ್ಯೆಗೆ ಸಚಿವರು ಸ್ಪಂದಿಸಿ1 ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದಸೂಡಿ ಆಸ್ಪತ್ರೆಯಲ್ಲಿ ಕಾಯಂ ವೈದ್ಯರಿಲ್ಲದಿದ್ದರೂ ಆಸ್ಪತ್ರೆಯಲ್ಲಿ ಸ್ಟ್ಾ ನರ್ಸ್‌ಗಳೇ ರೋಗಿಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ದಿನದ 24 ಗಂಟೆ ಜ್ವರ, ಕೆಮ್ಮು, ಗಾಯಕ್ಕೆ ಬ್ಯಾಡೆಂಜ್, ಗರ್ಭಿಣಿ, ಬಾಣಂತಿ, ಮಕ್ಕಳಿಗೆ ಚಚ್ಚುಮದ್ದು ಸೇರಿ ಸಾಮಾನ್ಯ ತೊಂದರೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ 25 ದಿನಗಳಿಂದ ಸ್ಟ್ಾ ನರ್ಸ್‌ಗಳಿಲ್ಲದೆ ತೊಂದರೆಯಾಗಿದೆ. ಎರಡು ದಿನಕ್ಕೊಮ್ಮೆ ವೈದ್ಯರು ಬಂದಾಗ ಚಿಕಿತ್ಸೆ ಪಡೆಯಬೇಕಿದ್ದು, ರಾತ್ರಿ ಚಿಕಿತ್ಸೆ ಸಿಗದಂತಾಗಿದೆ. ಡಿ.ಬಿ.ರವಿಕುಮಾರ್ ದಬ್ಬಗುಂಟೆ ದಸೂಡಿ ಆಸ್ಪತ್ರೆಯೊಂದಿಗೆ ಕಂದಿಕೆರೆ ಆಸ್ಪತ್ರೆಯನ್ನು ಹೆಚ್ಚುವರಿಯಾಗಿ ನೀಡಿದ್ದರಿಂದ ಒಂದು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಮತ್ತೊಂದು ಆಸ್ಪತ್ರೆ ವ್ಯಾಪ್ತಿಯ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇಲ್ಲಿಯವರೆಗೂ ರಾತ್ರಿ ಹೆರಿಗೆ ಸೇರಿ ತುರ್ತು ಸಂದರ್ಭಗಳಲ್ಲಿ ಸ್ಟ್ಾ ನರ್ಸ್ ರೋಗಿಗಳಿಗೆ ನೆರವಾಗುತ್ತಿದ್ದರು. ಅವರು ಧರಣಿಗೆ ತೆರಳಿದ್ದರಿಂದ ಸಮಸ್ಯೆಯಾಗಿದೆ. ನರ್ಸ್ ಕರ್ತವ್ಯಕ್ಕೆ ಮರಳಿದ ಬಳಿಕವಷ್ಟೇ ಸಮಸ್ಯೆ ಸರಿಹೋಗುತ್ತದೆ. ಡಾ.ಸಂದೀಪ್ ವೈದ್ಯಾಧಿಕಾರಿ, ದಸೂಡಿ ಸರ್ಕಾರಿ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net