ಶ್ರೀ ಸೋಮನಹಳ್ಳಿ ಅಮ್ಮನ ರಥೋತ್ಸವದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದ ವ್ಯಕ್ತಿ ಮೃತ್ಯು

02
Published on

ಮಂಡ್ಯ: ನಾಗಮಂಗಲ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿರುವ ಶ್ರೀ ಸೋಮನಹಳ್ಳಿ ಅಮ್ಮನ ರಥೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಹೃದಯಾಘತದಿಂದ ಮೃತಪಟ್ಟಿದ್ದಾರೆ. ಮೈಸೂರು ಮೂಲದ ರವಿಕುಮಾರ್(42) ಮೃತ ದುರ್ದೈವಿ.

ಮೈಸೂರಿನ ಸುಣ್ಣದಕೇರಿ ಬಡಾವಣೆ ನಿವಾಸಿ ರವಿಕುಮಾರ್, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಬಂದಿದ್ದರು. ಮಧ್ಯಾಹ್ನ ರಥೋತ್ಸವದ ವೇಳೆ ಹೃದಯಾಘಾತದಿಂದ ರವಿಕುಮಾರ್ ಕುಸಿದುಬಿದ್ದಿದ್ದಾರೆ.

ಕೂಡಲೇ ಆಂಬುಲೆನ್ಸ್​ನಲ್ಲಿ ನಾಗಮಂಗಲ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ರವಿಕುಮಾರ್ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net