ಎಲ್‌ಕೆಜಿ-ಯುಕೆಜಿ ಪ್ರಾರಂಭಕ್ಕೆ ಅನುಮತಿ

ರಾಜ್ಯದಲ್ಲಿ 581 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ) ತರಗತಿಗಳನ್ನು 2026-27ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮತಿ ನೀಡಿ ಗುರುವಾರ ಆದೇಶ ಹೊರಡಿಸಿದೆ.
KEA-Logo
lkg-ukgfolder
Published on: 

ಬೆಂಗಳೂರು: ರಾಜ್ಯದಲ್ಲಿ 581 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ) ತರಗತಿಗಳನ್ನು 2026-27ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಮತಿ ನೀಡಿ ಗುರುವಾರ ಆದೇಶ ಹೊರಡಿಸಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಪ್ರತ್ಯೇಕ ತರಗತಿಗಳನ್ನು ಪ್ರಾರಂಭಿಸಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರಿಗೆ ಅನುಮತಿ ನೀಡಿದೆ. ಇದಕ್ಕೆ ತಗಲುವ ವೆಚ್ಚವನ್ನು ಯೋಜನೆಯಡಿ ಭರಿಸಲು ಆದೇಶದಲ್ಲಿ ಸೂಚಿಸಿದೆ.

ತರಗತಿ ಶಿಕ್ಷಕರು ದ್ವಿಭಾಷಾ ಹಾಗೂ ಚಟುವಟಿಕೆ ಆಧಾರಿತ ಕಲಿಕಾ ಅವಧಿಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಕಲಿಕೆ, ಬರವಣಿಗೆ, ಸೃಜನಶೀಲ ಚಟುವಟಿಕೆಗಳನ್ನು ಆಯೋಜಿಸಬೇಕು. ಜತೆಗೆ ವಿದ್ಯಾರ್ಥಿ ಪ್ರೊೈಲ್ ನಿರ್ವಹಿಸುವುದು ಸೇರಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ತರಗತಿವಾರು ದ್ವಿಭಾಷಾ ಮಾಧ್ಯಮದಲ್ಲಿ ಬೋಧಿಸಬೇಕು.

ಬೆಳಗ್ಗೆ 10ರಿಂದ ಮಧ್ಯಾಹ್ನ 30.30ರವರೆಗೆ ಶಾಲಾ ಚಟುವಟಿಕೆ ನಡೆಸಬೇಕು. ಮಕ್ಕಳ ನೋಂದಣಿ ಹೆಚ್ಚಿಸಲು ಪ್ರಚಾರ ಕೈಗೊಳ್ಳಬೇಕು. ಎಲ್‌ಕೆಜಿ, ಯುಕೆಜಿ ಪ್ರತ್ಯೇಕ ವಿಭಾಗ ಪ್ರಾರಂಭಿಸಬೇಕು, ದಾಖಲಾಗುವ ಮಗು 4 ವರ್ಷದಿಂದ 5 ವರ್ಷದ ವಯೋಮಿತಿ ಇರಬೇಕು. ಕೆಪಿಎಸ್ ಶಾಲೆಗಳು ಸೇರಿ ಅನುಮೋದನೆಯಾಗಿರುವ ಶಾಲೆಗಳಲ್ಲಿ ಒಂದು ತರಗತಿಗೆ ಗರಿಷ್ಠ 40 ಮಕ್ಕಳನ್ನು ಮಾತ್ರ ದಾಖಲು ಮಾಡಿಕೊಳ್ಳಲು ಮಿತಿ ನಿಗದಿಪಡಿಸಲಾಗಿದೆ. ಪ್ರಾಥಮಿಕ ಪೂರ್ವ ಮಕ್ಕಳಿಗೂ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ ವಿತರಿಸಬೇಕು. ಇದಕ್ಕಾಗಿ ಪ್ರತ್ಯೇಕ ಆದೇಶ ಹೊರಡಿಸುವುದಾಗಿ ತಿಳಿಸಿದೆ.