ಕರ್ನಾಟಕದಲ್ಲಿ ಸಂಜೆ ಹೊತ್ತಿಗೆ ಶೇ.63.90 ರಷ್ಟು ಮತದಾನ

vote
Published on

ಬೆಂಗಳೂರು: ಕರ್ನಾಟಕದಲ್ಲಿ ಸಂಜೆ 5 ಗಂಟೆ ಹೊತ್ತಿಗೆ ಶೇ.63.90 ರಷ್ಟು ಮತದಾನವಾಗಿದೆ. ಬೆಂಗಳೂರಿನ ಮೂರು ಕ್ಷೇತ್ರಗಳು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಶೇಕಡವಾರು ಮತದಾನ ಶೇ.50 ದಾಟಿದೆ.

ಬೆಂಗಳೂರು ಗ್ರಾಮಾಂತರದಲ್ಲಿ ಶೇ.61.78, ಬೆಂಗಳೂರು ಉತ್ತರ ಶೇ.50.04, ಬೆಂಗಳೂರು ಕೇಂದ್ರ ಶೇ.48.61, ಬೆಂಗಳೂರು ದಕ್ಷಿಣ ಶೇ.49.37 ಮತ ಚಲಾವಣೆಯಾಗಿದೆ.

ಅದೇ ರೀತಿ ಉಡುಪಿ-ಚಿಕ್ಕಮಗಳೂರು ಶೇ.72.13, ದಕ್ಷಿಣ ಕನ್ನಡ ಶೇ.71.83, ಹಾಸನ ಶೇ.71.13, ಚಿಕ್ಕಬಳ್ಳಾಪುರ ಶೇ.71,  ಚಿತ್ರದುರ್ಗ ಶೇ.67 ರಷ್ಟು ಬಿರುಸಿನ ಮತದಾನವಾಗಿದೆ.

ಇನ್ನು ತುಮಕೂರು ಶೇ. 72.10, ಮಂಡ್ಯ ಶೇ.74.87, ಮೈಸೂರು ಶೇ.65.85, ಚಾಮರಾಜನಗರ ಶೇ.69.60, ಚಿತ್ರದುರ್ಗ ಶೇ.70.97, ಕೋಲಾರ ಶೇ.71.26 ಮತ ಚಲಾವಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net