

ನವದೆಹಲಿ: ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿಬಿಸಿ ಆಹಾರ ಹಾಗೂ ಬೆಸಿಗೆಕಾಲದಲ್ಲಿ ತಂಪಾದ ಕೂಲ್ ಕೂಲ್ ಆಗಿರುವ ಆಹಾರವನ್ನು ಸೇವಿಸುತ್ತೇವೆ. ತಂಪುಪಾನೀಯ ದಿಗ್ಗಜ ಪೆಪ್ಸಿ ತನ್ನ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ.
ಪೆಪ್ಸಿ ತನ್ನ ಟ್ರೇಡ್ಮಾರ್ಕ್ ಕೆಂಪು ಮತ್ತು ನೀಲಿ ಬಣ್ಣಗಳ ಹಿನ್ನೆಲೆಯಲ್ಲಿ ಹೊಸ ಫಾಂಟ್ಗಳಲ್ಲಿರುವ ಪೆಪ್ಸಿ ಎಂಬ ಹೆಸರನ್ನು ಬೋಲ್ಡ್ ಫಾಂಟ್ಗಳಲ್ಲಿ ಬರೆಯಲಾಗಿದ್ದು, ಸಣ್ಣ ಅಕ್ಷರದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಎಂದು ಬರೆಯಲಾಗಿದೆ. ನೂತನ ಲೋಗೋದ ಚಿತ್ರವನ್ನು ಪಾಪ್ ಬೇಸ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಬ್ರ್ಯಾಂಡ್ನ 125 ನೇ ವಾರ್ಷಿಕೋತ್ಸವದೊಂದಿಗೆ ಹೊಸ ಲೋಗೋವನ್ನು ಹೊರತರುವ ಯೋಜನೆಯಾಗಿದೆ. ಲೋಗೋವನ್ನು ಈ ವರ್ಷ ಉತ್ತರ ಅಮೆರಿಕದಲ್ಲಿ ಹಾಗೂ ಮುಂದಿನ ವರ್ಷದಿಂದ ಜಗತ್ತಿನಾದ್ಯಂತ ಬಿಡುಗಡೆ ಮಾಡುತ್ತಿದೆ. 1898-2022ರ ನಡುವೆ ಬಂದು ಹೋದ ಪೆಪ್ಸಿಯ ವಿವಿಧ ಲೋಗೋಗಳ ಚಿತ್ರಗಳನ್ನು ಪಾಪ್ ಬೇಸ್ ಹಂಚಿಕೊಂಡಿದ್ದಾರೆ.
ಪ್ರಸಕ್ತ ಇರುವ ಲೋಗೋ 2008ರಲ್ಲಿ ಚಾಲ್ತಿಗೆ ಬಂದಿದೆ. ಇದೀಗ ಹೊಸ ಲೋಗೋವನ್ನು ಪೆಪ್ಸಿ ಲಾಂಚ್ ಮಾಡಿದೆ. ಪೆಪ್ಸಿಯ ಈ ನೂತನ ಲೋಗೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಹೊಸ ಬದಲಾವಣೆ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.