More

    ಏ.1ರಿಂದ 2,000 ರೂ. ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ 1.1% ವಿನಿಮಯ ಶುಲ್ಕ!

    ನವದೆಹಲಿ: ಇಂದಿನ ಟೆಕ್ನಾಲಕಿ ತುಂಬಾ ಅಪ್​ಡೇಟ್​​​ ಆಗಿದೆ. ಇಂದಿನ ಹೆಚ್ಚಿನ ವ್ಯವಹಾರಗಳು ಆನ್​ಲೈನ್​ ಮೂಲಕವಾಗಿ ನಡೆಯುತ್ತದೆ. ಯುಪಿಐ ವಹಿವಾಟುಗಳಿಗೆ ಬಳಸುವ ಪ್ರಿಪೇಯ್ಡ್ ವ್ಯಾಲೆಟ್‌ಗಳಿಗೆ (ವಿನಿಮಯ ಶುಲ್ಕ) ಇಂಟರ್ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆ.

    ವಿವಿಧ ವರ್ಗದ ವ್ಯಾಪಾರಿಗಳಿಗೆ ವಿನಿಮಯ ಶುಲ್ಕ ಭಿನ್ನವಾಗಿದ್ದು, ಶೇ. 0.5ರಿಂದ ಶೇ. 1.1ರವರೆಗೆ ಇರಲಿದೆ. ನಿರ್ದಿಷ್ಟ ವರ್ಗಗಳಲ್ಲಿ ಮಿತಿ ಸಹ ಅನ್ವಯಿಸುತ್ತದೆ ಎಂದು ಎನ್‌ಪಿಸಿಐ ವಿವರ ನೀಡಿದೆ. ವಹಿವಾಟು ಮೊತ್ತ ಎರಡು ಸಾವಿರ ರೂಪಾಯಿಗಿಂತ ಹೆಚ್ಚಿದ್ದಲ್ಲಿ ಯುಪಿಐ ವಹಿವಾಟುಗಳಿಗೆ 1.1 ಶುಲ್ಕುವನ್ನು ವಿಧಿಸಲಾಗುತ್ತದೆ. ಈ ಹೊಸ ಶುಲ್ಕಗಳು ಇದೇ ಬರುವ ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.

    ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ರೋಡ್ ಶೋ ವೇಳೆ ತಮಟೆ ಬಡಿಯುವವರಿಗೆ 1 ಸಾವಿರ ರೂ. ಕೊಟ್ಟ ಸಿದ್ದರಾಮಯ್ಯ
    ಈ ಶುಲ್ಕವು ಪ್ರಿಪೇಯ್ಡ್ ಪಾವತಿ ಸಾಧನಗಳ ಮೂಲಕ ಮಾಡಿದ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. “ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ, ಸಾಮಾನ್ಯ ಯುಪಿಐ ಪಾವತಿಗಳ ಮೇಲೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದೇ ರೀತಿ ಜನರು ವ್ಯಾಪಾರಿಗಳಿಗೆ ಪಾವತಿಸುವ ಹಣಕ್ಕೂ ಯಾವುದೇ ಶುಲ್ಕ ಇರುವುದಿಲ್ಲ.

    ಯಾರಿಗೆ ಈ ಶುಲ್ಕ ಅನ್ವಯಿಸುತ್ತದೆ: ಟೆಲಿಕಾಂ, ಶಿಕ್ಷಣ, ಮತ್ತು ಯುಟಿಲಿಟೀಸ್‌/ಪೋಸ್ಟ್ ಆಫೀಸ್‌ಗಳಿಗೆ ಇಂಟರ್‌ಚೇಂಜ್ ಶುಲ್ಕವು ಶೇ. 0.7 ಆಗಿದ್ದರೆ, ಸೂಪರ್‌ಮಾರ್ಕೆಟ್‌ಗಳಿಗೆ ಶುಲ್ಕವು ವಹಿವಾಟಿನ ಮೌಲ್ಯದ ಶೇ. 0.9 ಆಗಿದೆ. ವಿಮೆ, ಸರ್ಕಾರ, ಮ್ಯೂಚುವಲ್ ಫಂಡ್‌ಗಳು ಮತ್ತು ರೈಲ್ವೇಗಳಿಗೆ ಶೇ. 1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇಂಧನಕ್ಕಾಗಿ ಶೇ. 0.5 ಮತ್ತು ಕೃಷಿಗೆ ಶೇ. 0.7ರಷ್ಟು ಶುಲ್ಕ ವಿಧಿಸಲಾಗುತ್ತದೆ.

    ಮುದ್ದು ಅಜ್ಜಿಯರಿಗಾಗಿ ಮುಂದಿನ ಬಾರಿ ಕನ್ನಡದಲ್ಲಿಯೇ ಮಾತನಾಡುತ್ತೇನೆ; ನಟಿ ರಮ್ಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts