ಬ್ಯಾಂಕ್​ ಸುಧಾರಿಸುವಲ್ಲಿ ಜನಪ್ರತಿನಿಧಿಗಳು ವಿಫಲ

sfcs
ಕೋಲಾರ ತಾಲೂಕು ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕೆ.ವಿ.ದಯಾನಂದ ರೈತರಿಗೆ ಸಾಲದ ಚೆಕ್​ ವಿತರಿಸಿದರು. ಮುನೀಶ್ವರಪ್ಪ ಇದ್ದರು.
Published on

ಕೋಲಾರ: ರೈತರಿಗೆ, ಮಹಿಳೆಯರಿಗೆ ಸಹಾಯ ಮಾಡಲು ಡಿಸಿಸಿ ಬ್ಯಾಂಕ್​ ಆರ್ಥಿಕ ಶಕ್ತಿ ಕಳೆದುಕೊಂಡಿದೆ. ಇದರ ಪರಿಸ್ಥಿತಿ ಸುಧಾರಣೆ ಮಾಡುವಲ್ಲಿ ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ವಿಲರಾಗಿದ್ದಾರೆ ಎಂದು ಸೊಸೈಟಿ ಅಧ್ಯಕ್ಷ ಕೆ.ವಿ.ದಯಾನಂದ್​ ಆರೋಪಿಸಿದರು.

ತಾಲೂಕಿನ ಕಡಗಟ್ಟೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ 14,65,000 ರೂ. ಸಾಲದ ಚೆಕ್​ ವಿತರಿಸಿ ಮಾತನಾಡಿ, ಸೊಸೈಟಿ ರೈತರು, ಮಹಿಳೆಯರ ಆರ್ಥಿಕ ಶಕ್ತಿಯಾಗಿತ್ತು, ಇದೀಗ ಶಕ್ತಿ ಕಳೆದುಕೊಂಡು ಪಾತಾಳಕ್ಕೆ ಕುಸಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋಲಾರ ಡಿಸಿಸಿ ಬ್ಯಾಂಕ್​ ಎಂದರೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು, ಈಗ ಅದರ ಪರಿಸ್ಥಿತಿ ನೋಡಿದರೆ ಬೇಸರ ಉಂಟು ಮಾಡುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಭೆ ಸಮಾರಂಭಗಳಲ್ಲಿ ನಾವು ರೈತರ ಪರ ಎಂದು ಬೊಬ್ಬೆ ಹೊಡೆಯುವವರು ಬ್ಯಾಂಕ್​ಪರ ಧ್ವನಿ ಎತ್ತುವ ಮೂಲಕ ಸಾಲ ಸೌಲಭ್ಯ ಕೊಡಿಸಲಿ ಎಂದು ಒತ್ತಾಯಿಸಿದರು.

ಬ್ಯಾಂಕಿನಲ್ಲಿ ಆಗಿರುವ ಕೆಲ ಬೆಳವಣಿಗೆಗಳಿಂದ ವ್ಯವಸ್ಥಾಪಕ ನಿರ್ದೇಶಕರು ರಜೆ ಮೇಲೆ ತೆರಳಿದ್ದಾರೆ. ಇದು ಬ್ಯಾಂಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಮತ್ತೊಬ್ಬರನ್ನು ನಿಯೋಜನೆ ಮಾಡಲು ಸಹಕಾರ ಇಲಾಖೆಯ ಉಪ ನಿಬಂಧಕರಾಗಲಿ, ಪ್ರಾದೇಶಿಕ ನಿಬಂಧಕರಾಗಲಿ, ಆಡಳಿತಾಧಿಕಾರಿಯಾಗಲಿ ಕ್ರಮವಹಿಸುತ್ತಿಲ್ಲ. ಇದನೆಲ್ಲ ಗಮನಿಸುತ್ತಿದ್ದರೆ ಯಾರಿಗೂ ಆಸಕ್ತಿಯಿಲ್ಲದಂತಾಗಿದೆ, ಇದಕ್ಕೆಲ್ಲ ಜನಪ್ರತಿನಿಧಿಗಳ, ಅಧಿಕಾರಿಗಳ ಅಸಡ್ಡೆಯೇ ಕಾರಣ ಎಂದು ಕಿಡಿಕಾರಿದರು.

ಆಡಳಿತ ಮಂಡಳಿ ಸ್ಥಾನಕ್ಕೆ ಈಗಾಗಲೇ ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಆಯ್ಕೆಯಾಗಿರುವವರಲ್ಲಿ ಶಾಸಕರು ಇದ್ದಾರೆ. ಅವರು ಸರ್ಕಾರದ ಮೇಲೆ ಒತ್ತಡ ತಂದು ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕಿತ್ತು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಅವರು ಬ್ಯಾಂಕ್​ ಬಗ್ಗೆ ಒಂದು ಭಾರಿ ಸಹ ಗಮನ ಹರಿಸದೆ ಇರುವುದು ವಿಷಾದಕರ ಸಂಗತಿ ಎಂದು ಕಿಡಿಕಾರಿದರು.

ಸೊಸೈಟಿಯು ಯಾರ ಮೇಲೂ ಅವಲಂಭನೆಯಾಗದೆ ಸ್ವಂತ ಬಂಡವಾಳದಿಂದ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಶಕ್ತಿ ಹೊಂದಿದೆ. ಮಧ್ಯಮಾವಧಿ, ವೇತನ, ನಿವೇಶನ, ಸಣ್ಣ ವ್ಯಾಪಾರ, ಕೋಳಿ, ಹುಳ ಸಾಕಣೆ, ಸ್ತ್ರೀಶಕ್ತಿ ಸಂದ ಸದಸ್ಯರಿಗೆ ಸಾಲ ನೀಡಲಾಗುತ್ತಿದೆ. ಸಮರ್ಪಕವಾಗಿ ದಾಖಲೆ ಸಲ್ಲಿಸಿದ 24 ತಾಸಿನಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು.ಸಾಲ ಪಡೆದುಕೊಂಡಿರುವವರು ಷೇರುದಾರರ ಹಾಗೂ ಠೇವಣಿದಾರರ ಹಿತದೃಷ್ಟಿಯಿಂದ ಪ್ರಮಾಣಿಕವಾಗಿ ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಿದರು.

ಸಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುನೀಶ್ವರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net