

* ಕಿರುವಾರ ಎಸ್.ಸುದರ್ಶನ್ ಕೋಲಾರ
ಪೂರ್ವ ಪ್ರಾಥಮಿಕ ಹಂತದಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ಕಲ್ಪಿಸಲು ಸರ್ಕಾರ ಕ್ರಮವಹಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ ಹೆಚ್ಚುವರಿ 16 ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾಗಲಿವೆ.
ಕಳೆದ ಬಜೆಟ್ನಲ್ಲಿ ರಾಜ್ಯಾದ್ಯಂತ 500 ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲು ಸರ್ಕಾರ ಘೋಷಣೆ ಮಾಡಿತ್ತು, ಅದರಂತೆ ಜಿಲ್ಲೆಗೆ 16 ಶಾಲೆಗಳಿಗೆ ಅನುಮತಿ ನೀಡಿದ್ದು, ಆ ಪೈಕಿ ಕೆಜಿಎ್, ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕಿಗೆ ತಲಾ 3 ಹಾಗೂ ಮುಳಬಾಗಿಲು, ಶ್ರೀನಿವಾಸಪುರ ತಾಲೂಕಿಗೆ ತಲಾ 2 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಿದೆ. ತಾಲೂಕು ಮತ್ತು ಹೋಬಳಿ ಕೇಂದ್ರಕ್ಕೆ ಒಂದರಂತೆ ಘೋಷಿಸಿದ್ದು, ಆಯ್ದ ಶಾಲೆಗಳನ್ನು ಉನ್ನತಿಕರಿಸಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲು ಮುಂದಾಗಿದೆ.
ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳದ ಮಿತಿಯು 2025-&26ನೇ ಸಾಲಿನಿಂದಲೇ ಜಾರಿಗೆ ಬರಲಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಿ ಆದೇಶಿಸಿದ್ದಾರೆ. ಶಾಲಾ ಆವರಣದಲ್ಲಿ ಲಭ್ಯವಿರುವ ಕಟ್ಟಡಗಳು, ಇನ್ನಿತರ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ದಾಖಲಾತಿ ಹಾಗೂ ವಿದ್ಯಾಭ್ಯಾಸಕ್ಕಾಗಿ ಎಲ್ಲ ರೀತಿಯ ಅವಕಾಶ ಕಲ್ಪಿಸಬೇಕು ಎಂದು ಷರತ್ತು ವಿಧಿಸಿದ್ದಾರೆ.
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಸಹಯೋಗದೊಂದಿಗೆ ಆಯ್ದ ಗ್ರಾಮಗಳಲ್ಲಿನ ಶಾಲೆಗಳನ್ನು ಉನ್ನತಿಕರಿಸುವ ಜತೆಗೆ ಅಭಿವೃದ್ಧಿಪಡಿಸಲು ಕ್ರಮವಹಿಸಿದ್ದು, ಪ್ರತಿ ಶಾಲೆಗೆ 4 ಕೋಟಿ ರೂ. ಮಂಜೂರು ಮಾಡಿದ್ದು, ಸದರಿ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುವುದು. ಉಚಿತ ಸಾರಿಗೆ ವ್ಯವಸ್ಥೆಯೂ ಇರಲಿದೆ.
ಪ್ರಸ್ತುತ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ದಾಖಲಾತಿ ಮಿತಿ ಶೇ.30ರಷ್ಟಿದ್ದು, ಇದನ್ನು ಶೇ.40ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಅದೇ ರೀತಿ ಪ್ರಾಥಮಿಕ ತರಗತಿಗಳಲ್ಲಿ 30 ಮಕ್ಕಳಿದ್ದು, ಈ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗುತ್ತದೆ. ಮೂಲ ಸೌಕರ್ಯ ಹಾಗೂ ಶಿಕ್ಷಕರ ಲಭ್ಯತೆ ನೋಡಿ ಸಾಧ್ಯವಾದಲ್ಲಿ 60 ಮಕ್ಕಳವರೆಗೂ ಅನುಮತಿ ನೀಡಲು ಇಲಾಖೆಯು ಚಿಂತನೆ ನಡೆಸಿದೆ.
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ವಿದ್ಯಾಭ್ಯಾಸ ಕೊಡಿಸಲಾಗದಂತಹ ಪಾಲಕರಿದ್ದಾರೆ. ಅಂತಹವರು ಕೆಪಿಎಸ್ ಶಾಲೆಗಳಗೆ ತಮ್ಮ ಮಕ್ಕಳನ್ನು ಸೇರಿಸಿ ಪಿಯುಸಿ ತನಕ ಅಂಗ್ಲ ಮಾಧ್ಯಮ ಶಿಕ್ಷಣ ಕೊಡಿಸಲು ಅನುಕೂಲವಾಗಲಿದೆ. ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಹೆಚ್ಚಿಸಲು ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
* ತಾರತಮ್ಯ ಆರೋಪ
ಕಾಂಗ್ರೆಸ್ ಶಾಸಕರಿರುವ ಕೆಜಿಎ್, ಬಂಗಾರಪೇಟೆ, ಮಾಲೂರು ಹಾಗೂ ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಮೂರು ಶಾಲೆಗಳು ಹಾಗೂ ಜೆಡಿಎಸ್ ಶಾಸಕರಿರುವ ಮುಳಬಾಗಿಲು, ಶ್ರೀನಿವಾಸಪುರ ಕ್ಷೇತ್ರಗಳಿಗೆ ತಲಾ ಎರಡು ಶಾಲೆಗಳನ್ನು ಉನ್ನತಿಕರಿಸಿ ಕೆಪಿಎಸ್ ಶಾಲೆ ಪ್ರಾರಂಭಿಸಲಾಗುವುದು. ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ವಿಚಾರದಲ್ಲೂ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಒಂದೇ ಸಮನೆ ನೋಡಬೇಕಿತ್ತು, ಆದರೆ ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಿಗೆ ಬೆಣ್ಣೆ, ಜೆಡಿಎಸ್ ಶಾಸಕರಿರುವ ಕ್ಷೇತ್ರಗಳಿಗೆ ಸುಣ್ಣ ಇಟ್ಟು ತಾರತಮ್ಯ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
* ಎಲ್ಲೆಲ್ಲಿ ಕೆಪಿಎಸ್ ಪ್ರಾರಂಭ?
ತಾಲೂಕು ಗ್ರಾಮಗಳು
ಬಂಗಾರಪೇಟೆ ಕ್ಯಾಸಂಬಳ್ಳಿ ್ರೌಢ ಶಾಲೆ, ದೊಡ್ಡೂರು ಪ್ರೌಢ ಶಾಲೆ, ಬಂಗಾರಪೇಟೆ ಬಾಲಕರ ಹಾಗೂ ಬಾಲಕಿಯರ ಪದವಿ ಕಾಲೇಜು
ಕೆಜಿಫ್ ಕೆಜಿಫ್ ಬಾಲಕಿಯರ, ಬಾಲಕರ ಪಿಯು ಕಾಲೇಜು, ರಾಮಸಾಗರ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ ಕ್ಯಾಸಂಬಳ್ಳಿ
ಕೋಲಾರ ಬೆಗ್ಲಿ ಹೊಸಹಳ್ಳಿ ಸರ್ಕಾರಿ ಪ್ರೌಢ ಶಾಲೆ, ವೇಮಗಲ್ ಸರ್ಕಾರಿ ಪಿಯು ಕಾಲೇಜು, ಕೋಲಾರ ಸರ್ಕಾರಿ ಬಾಲಕಿಯರ ಕಾಲೇಜು
ಮಾಲೂರು ಮಾಲೂರು, ಟೇಕಲ್ ಸರ್ಕಾರಿ ಜೂನಿಯರ್ ಕಾಲೇಜು, ತೊರಲಕ್ಕಿ ಪ್ರೌಢ ಶಾಲೆ
ಮುಳಬಾಗಿಲು ಮುಳಬಾಗಿಲು ಸರ್ಕಾರಿ ಜೂನಿಯರ್ ಕಾಲೇಜು, ಕುರುಡಮಲೆ ಸರ್ಕಾರಿ ಪ್ರೌಢ ಶಾಲೆ
ಶ್ರೀನಿವಾಸಪುರ ರಾಯಲ್ಪಾಡು ಸರ್ಕಾರಿ ಜೂನಿಯರ್ ಕಾಲೇಜು, ಶ್ರೀನಿವಾಸಪುರ ಸರ್ಕಾರಿ ಬಾಲಕಿಯರ ಕಾಲೇಜು.
ಪ್ರಮುಖ ಉದ್ದೇಶಗಳು..
* ಮಕ್ಕಳು ಶಾಲೆ ಬಿಟ್ಟು ಹೋಗದಂತೆ ಕ್ರಮವಹಿಸುವುದು.
* ಶಾಲಾ ದಾಖಲಾತಿ ಹೆಚ್ಚಿಸುವುದು.
* ಗುಣಾತ್ಮಕ ಶಿಕ್ಷಣ ಕಲ್ಪಿಸಿವುದು.
* ಆಯ್ದ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ
ಕೋಟ್...
ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚುವರಿ ಶಾಲೆಗಳನ್ನು ಘೋಷಣೆ ಮಾಡಿತ್ತು, ಇದಕ್ಕೆ ಸರ್ಕಾರವು ಅನುಮೋದನೆ ನೀಡಿದ್ದು, ಶಿಕ್ಷಣದಿಂದ ವಂಚನೆಯಾಗಬಾರದು ಎಂದು ಸರ್ಕಾರ ಕ್ರಮವಹಿಸಿ, ಕೆಪಿಎಸ್ ಶಾಲೆ ಪ್ರಾರಂಭಕ್ಕೆ ಕ್ರಮವಹಿಸಿದೆ.
- ಕೆ.ವೈ.ನಂಜೇಗೌಡ, ಶಾಸಕ, ಮಾಲೂರು
ಕೋಟ್...
ಸರ್ಕಾರು ಶಾಲೆಗಳ ವಿಚಾರವೇ ಅಲ್ಲ, ಪ್ರತಿ ವಿಚಾರದಲ್ಲೂ ತಾರತಮ್ಯ ಮಾಡಿಕೊಂಡು ಬರುತ್ತಿದೆ. ಹೊಸದಾಗಿ ಆಯ್ಕೆಯಾಗಿರುವ 78 ಶಾಸಕರ ಆಸೆ ಅಕಾಂೆಗಳಿಗೆ ತಣ್ಣೀರು ಎರಚಿ ಶಾಪವಾಗಿ ಪರಿವರ್ತನೆಯಾಗಿದೆ, ಈ ಶಾಪವು ಸರ್ಕಾರಕ್ಕೆ ತಟ್ಟುವಂತಾಗಲಿ.
- ಸಮೃದ್ಧಿ ಮಂಜುನಾಥ್, ಶಾಸಕ, ಮುಳಬಾಗಿಲು