ಒಂದು ರಾಷ್ಟ್ರ, ಒಂದು ಚುನಾವಣೆ ಆಡಳಿತಾತ್ಮಕ ಕೆಲಸಗಳಿಗೆ ಸಹಕಾರಿ ಎಂದ ಕೇಂದ್ರ ಸಚಿವ ಪಿಯೂಷ್ ಗೋಯಲ್! | Piyush Goyal

Piyush Goyal
Published on

Piyush Goyal: ಜನರು ಪದೇ ಪದೇ ಮತ ಚಲಾಯಿಸುವುದರಿಂದ ಬೇಸತ್ತಿದ್ದು, ಹೊಸ ಕಾನೂನು ರಚನೆಯಿಂದ ಚುನಾವಣೆಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಮತ್ತು ಆಡಳಿತವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಶನಿವಾರ (ಆಗಸ್ಟ್​​ 23) ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿಯಲ್ಲಿ ನಡೆದ ಉದ್ಯಮಿಗಳು ಮತ್ತು ವ್ಯಾಪಾರಿಗಳ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಗೋಯಲ್, ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಆಡಳಿತ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಎರಡಕ್ಕೂ ಅಡ್ಡಿಯುಂಟು ಮಾಡಿದಂತಾಗುತ್ತದೆ. ಪುನರಾವರ್ತಿತ ಮತದಾನದಿಂದಾಗಿ ಜನರಿಗೂ ಬೇಸರವಾಗುತ್ತದೆ ಎಂದಿದ್ದಾರೆ. ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಯು ಆಡಳಿತಾತ್ಮಕ ವೆಚ್ಚಗಳು ಮತ್ತು ಚುನಾವಣೆಗಳಿಂದ ಉಂಟಾಗುವ ಅಡಚಣೆಗಳನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗ ಆಡಳಿತಾತ್ಮಕ ಕೆಲಸಗಳು ಹೆಚ್ಚಾಗಿ ಸ್ಥಗಿತಗೊಳ್ಳುತ್ತವೆ ಎಂದು ತಿಳಿಸಿದರು.

ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ವ್ಯಾಪಾರ ಸಮುದಾಯದ ಜನರು ಮನಸ್ಸು ಮಾಡಿದರೆ, ನಾವು ಭಾರತದ ಪ್ರತಿಯೊಬ್ಬರ ಹೃದಯವನ್ನೂ ತಲುಪಬಹುದು ಎಂದು ಹೇಳುವ ಮೂಲಕ ವ್ಯಾಪಾರಸ್ಥರ ಸಾಮೂಹಿಕ ಜವಾಬ್ದಾರಿಯ ಅಗತ್ಯವನ್ನು ಒತ್ತಿ ಹೇಳಿದರು.

ಈ ಹೊಸ ವ್ಯವಸ್ಥೆ ಜಾರಿಗೆ ತರಲು ಸುಮಾರು 18 ತಿದ್ದುಪಡಿಗಳು ಆಗಬೇಕಾಗುತ್ತವೆ, ಇದರಲ್ಲಿ ಶಾಸಕಾಂಗಗಳ ಅವಧಿ ಮತ್ತು ವಿಸರ್ಜನೆ, ಗಡಿ ನಿರ್ಣಯ, ರಾಷ್ಟ್ರಪತಿ ಆಳ್ವಿಕೆ ಮತ್ತು ಚುನಾವಣಾ ಆಯೋಗದ ಅಧಿಕಾರಗಳಿಗೆ ಸಂಬಂಧಿಸಿದ 15 ಸಾಂವಿಧಾನಿಕ ತಿದ್ದುಪಡಿಗಳು ಸೇರಿವೆ ಎನ್ನಲಾಗಿದೆ. ಬಿಜೆಪಿ ವೆಚ್ಚ ಉಳಿತಾಯ ಮತ್ತು ಉತ್ತಮ ಆಡಳಿತದ ಬಗ್ಗೆ ಗಮನಹರಿಸಿದರೆ, ಟೀಕಾಕಾರರು ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ರಚನೆಗೆ ಬೆದರಿಕೆಗಳ ಬಗ್ಗೆ ಎಚ್ಚರಿಸುತ್ತಾರೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net