ಕೈಲಾಶ್​ ಖೇರ್​ ಮೇಲೆ ಬಾಟಲಿ ಎಸೆದು ಅವಮಾನ ಮಾಡಿದ ಕಿಡಿಗೇಡಿಗಳು!

kailash kher
Published on

ವಿಜಯನಗರ: ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಿಡಿಗೇಡಿಗಳು ಪದ್ಮಶ್ರೀ ಪುರಸ್ಕೃತ ಗಾಯಕ ಕೈಲಾಸ್ ಖೇರ್ ಮೇಲೆ ಬಾಟಲಿ ಎಸೆದು ಅವಮಾನ ಮಾಡಿರುವ ಆಘಾತಕಾರಿ ಸಂಗತಿ ನಡೆದಿದೆ.

ಉತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕನ ಮೇಲೆ ಬಾಟಲಿ ಎಸೆದಿದ್ದ ಕಿಡಿಗೇಡಿಗಳನ್ನು ಈಗ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಿಡಿಗೇಡಿಗಳು, ಕೈಲಾಸ್ ಖೇರ್​ ಕನ್ನಡ ಹಾಡುಗಳನ್ನು ಹಾಡಲಿಲ್ಲ ಎಂದು ಬಾಟಲಿ ಎಸೆದಿದ್ದಾರೆ ಎನ್ನಲಾಗಿದೆ.

ಈ ಘಟನೆ ಹಂಪಿ ಉತ್ಸವ ಸಮಾರೋಪ ಸಮಾರಂಭದ ಗಾಯತ್ರಿ ಪೀಠದ ವೇದಿಕೆಯಲ್ಲಿ ನಡೆದಿದ್ದು ಬಾಟಲಿ ಎಸೆದ ಮೇಲೂ ಗಾಯನ ಮುಂದುವರಿಸಿ ಕೈಲಾಸ್​ ಖೇರ್ ಪ್ರೌಢತೆ ತೋರಿಸಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net