

Virat: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಇಂದು (ಮೇ.12) ನಿವೃತ್ತಿ ಘೋಷಿಸಿದ್ದಾರೆ. ಅವರ ಅಭಿಮಾನಿಗಳಿಗೆ ಇದು ದು:ಖದ ವಿಷಯವಾಗಿದೆ. ಈ ಬಗ್ಗೆ ಅವರ ಪತ್ನಿ ಅನುಷ್ಕಾ ಶರ್ಮಾ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿಗೆ ಅಭಿನಂದನೆ ಸಲ್ಲಿಸಿರುವ ಅನುಷ್ಕಾ, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿರಾಟ್ಗೆ ಅನುಷ್ಕಾ ದೊಡ್ಡ ಫ್ಯಾನ್ ಎಂದು ಹೇಳುತ್ತಾ, ಕ್ರಿಕೆಟ್ ಮೈದಾನದಲ್ಲಿ ಇಬ್ಬರೂ ಒಟ್ಟಿಗೆ ಇರುವ ಚಿತ್ರವನ್ನು ಹಂಚಿಕೊಂಡ ಅನುಷ್ಕಾ, "ಜನರು ರೆಕಾರ್ಡ್ಸ್ ಮತ್ತು ಮೈಲಿಗಲ್ಲುಗಳ ಬಗ್ಗೆ ಮಾತನಾಡುತ್ತಾರೆ - ಆದರೆ ನೀವು ಎಂದಿಗೂ ತೋರಿಸದ ಕಣ್ಣೀರು, ಯಾರೂ ನೋಡದ ಹೋರಾಟಗಳು ಮತ್ತು ಆಟದ ಮೇಲಿನ ನಿಮ್ಮ ಅವಿನಾಭಾವ ಪ್ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ" ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.
'ನೀವು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೆಸ್ಟ್ನಿಂದ ನಿವೃತ್ತರಾಗುತ್ತೀರಿ ಎಂದು ನಾನು ಯಾವಾಗಲೂ ಊಹಿಸಿದ್ದೆ. ಆದರೆ ನೀವು ಯಾವಾಗಲೂ ನಿಮ್ಮ ಹೃದಯದ ಮಾತನ್ನು ಅನುಸರಿಸಿದ್ದೀರಿ, ನೀವು ವಿದಾಯಕ್ಕೆ ಅರ್ಹರಿದ್ದೀರ' ಎಂದು ಅನುಷ್ಕಾ ಕೊಹ್ಲಿ ಟೆಸ್ಟ್ ನಿವೃತ್ತಿಗೆ ಭಾವನಾತ್ಮಕ ಸಂದೇಶ ತಿಳಿಸಿದ್ದಾರೆ.
'ನೀನು ಆಟವನ್ನೂ, ದೇಶವನ್ನೂ ಎಷ್ಟು ಪ್ರೀತಿಸುತ್ತೀಯೆ ಎಂಬುದು ನನಗೆ ಬಹಳ ಚೆನ್ನಾಗಿ ಗೊತ್ತಿದೆ. ನಿನ್ನ ಈ ಸಂಯಮ, ಶ್ರಮ, ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮ ನನಗೆ ಸದಾ ಪ್ರೇರಣೆಯಾಗಿದೆ. ನಿನ್ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ನಿನ್ನ ಈ ಪ್ರಯಾಣದಲ್ಲಿ ನಾನು ಜತೆಯಾಗಿದ್ದೇನೆ. ನಿನ್ನ ಜೀವನದ ಈ ಟೆಸ್ಟ್ ಕ್ರಿಕೆಟ್ನ ಅಧ್ಯಾಯವನ್ನು ಎಷ್ಟು ಚೆನ್ನಾಗಿ ಮುಕ್ತಾಯಗೊಳಿಸಿದ್ದಕ್ಕೂ ನಮನ ಎಂದು ಬರೆದಿದ್ದಾರೆ.”
ಈ ಪೋಸ್ಟ್ಗಾಗಿ ಅನುಷ್ಕಾ ಶರ್ಮಾ ಒಂದು ಸುಂದರವಾದ ಫೋಟೋವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಇಬ್ಬರೂ ನಗುತ್ತಿದ್ದು, ಟೆಸ್ಟ್ ಪಂದ್ಯದ ಸಮಯದಲ್ಲಿ ವಿರಾಟ್ ಭಾರತೀಯ ಸಮವಸ್ತ್ರ (ಬಿಳಿ ಜೆರ್ಸಿ) ಧರಿಸಿದ್ದಾರೆ. ಭಾರತ 2-1 ಅಂತರದಿಂದ ಗೆದ್ದ ಆ ಪಂದ್ಯದ ಫೋಟೋ ಇದಾಗಿದೆ. (ಏಜೆನ್ಸೀಸ್)