ಗೋಶಾಲೆಗಾಗಿ ಹಣದ ಮಳೆಯೇ ಸುರಿಯಿತು!; ಸಂಗೀತ ಕಾರ್ಯಕ್ರಮದಲ್ಲೊಂದು ಅದ್ಭುತ!

Money F
Published on

ಗುಜರಾತ್: ಇಲ್ಲೊಂದು ಕಡೆ ಗೋಶಾಲೆಗಾಗಿ ಹಣದ ಮಳೆಯೇ ಸುರಿದಿದೆ. ಹೀಗೆ ಲಕ್ಷಾಂತರ ರೂಪಾಯಿ ಹಣ ಗೋವುಗಳಿಗಾಗಿಯೇ ಸಂಗ್ರಹವಾಗಿದೆ. ಇಂಥದ್ದೊಂದು ಅದ್ಭುತ ಸಂಗೀತ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

ಗುಜರಾತ್​ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಾಯಕಿ ಊರ್ವಶಿ ರಡಾದಿಯಾ ಹಾಡುಗಾರಿಕೆಗೆ ತಲೆದೂಗಿದ ಸಂಗೀತಾಸಕ್ತರು ಮೆಚ್ಚುಗೆಯಿಂದ ನೋಟುಗಳನ್ನು ಎಸೆದಿದ್ದಲ್ಲದೆ, ತಂದು ತಂದು ಆಕೆಯ ಮೇಲೆ ಸುರಿದಿದ್ದೂ ನಡೆದಿದೆ.

ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ. ಈಕೆ ಹಾರ್ಮೋನಿಯ ಹಿಡಿದು ಹಾಡಿದ್ದು, ನೆರೆದಿದ್ದವರು ನೋಟುಗಳನ್ನು ಎಸೆದು ಸಂಭ್ರಮಿಸಿದ್ದಾರೆ. ಈ ಹಣವನ್ನು ಸಂಗ್ರಹಿಸಿ ಗೋಶಾಲೆಯೊಂದಕ್ಕೆ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net