More

    ಹೃದಯಾಘಾತದಿಂದ ಸಾವಿಗೀಡಾದ ಆರನೇ ತರಗತಿ ವಿದ್ಯಾರ್ಥಿ; 23-24 ವರ್ಷದವರಿಬ್ಬರು ಕೂಡ ಹಾರ್ಟ್​ ಅಟ್ಯಾಕ್​ಗೆ ಬಲಿ

    ನವದೆಹಲಿ: ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಸಾಯುವ ಪ್ರಕರಣಗಳು ಮುಂದುವರಿದಿದ್ದು, ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮಾತ್ರವಲ್ಲದೆ 23-24 ವರ್ಷದ ಇಬ್ಬರೂ ಹಾರ್ಟ್​ ಅಟ್ಯಾಕ್​ಗೆ ಬಲಿಯಾಗಿದ್ದಾರೆ. ಅಂದಹಾಗೆ ಈ ಮೂರೂ ಪ್ರಕರಣಗಳು ಗುಜರಾತ್​ನಲ್ಲಿ ಸಂಭವಿಸಿವೆ.

    ಗುಜರಾತ್​ನ ದ್ವಾರಕಾ ದೇವಭೂಮಿಯಲ್ಲಿನ ದುಷ್ಯಂತ್ ಪಿಪ್ರೋತರ್ (12) ಎಂಬಾತ ಸಾವಿಗೀಡಾದ ವಿದ್ಯಾರ್ಥಿ. ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಬೆಳಗ್ಗೆ 5.30ರ ಸಮಯದಲ್ಲಿ ಎಚ್ಚರ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದ. ಉಸಿರು ನಿಂತು ಹೋದ ಹಾಗಿದ್ದ ಆತನನ್ನು ಕೂಡಲೇ ವೈದ್ಯರಲ್ಲಿ ಕರೆದೊಯ್ಯಲಾಗಿತ್ತು. ಆದರೆ ಆತ ಹೃದಯಾಘಾತದಿಂದ ಸತ್ತಿರುವುದಾಗಿ ವೈದ್ಯರು ತಿಳಿಸಿದರು ಎಂದು ಮನೆಯವರು ಹೇಳಿದ್ದಾರೆ.

    ಇನ್ನು ಸೋಮವಾರ ರಾಜ್​ಕೋಟ್​ನ ನಿಮಿತ್ ಸದ್ರಾನಿ ಎಂಬ 23 ವರ್ಷದ ವ್ಯಕ್ತಿ ಎದೆನೋವು ಬಂದು ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ. ಆತನನ್ನು ಕೂಡಲೇ ಆ್ಯಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಏನೂ ಪ್ರಯೋಜನ ಆಗಿಲ್ಲ. ಇನ್ನೊಂದು ಪ್ರಕರಣದಲ್ಲಿ ಕೋಕಡ್ಡದ್ ಗ್ರಾಮದ ಜಾಸ್ಮಿನ್ ವಘಾಸಿಯಾ ಎಂಬ 24 ವರ್ಷದ ವ್ಯಕ್ತಿ ಕೂಡ ಸೋಮವಾರ ಬೆಳಗ್ಗೆ ಸಂಬಂಧಿಕರೊಬ್ಬರು ಫ್ಯಾಕ್ಟರಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಹಠಾತ್ ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ.

    ಬಿಎಂಟಿಸಿ ಬಸ್​ನಲ್ಲಿ ಸಂಚರಿಸಿದ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ; ಪೊಲೀಸ್ ಕಮಿನಷರ್ ಪ್ರತಿಕ್ರಿಯೆ ಹೀಗಿತ್ತು..

    ಪಿಒಪಿ ಗಣೇಶ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ; ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts