ಕಾಡಾನೆ ದಾಳಿಗೆ ಬೇಸತ್ತ ಜನ ಖೆಡ್ಡಾ ತೋಡಿದ್ರು..!

elephant
Published on

ಸಕಲೇಶಪುರ: ಕಾಡಾನೆಗಳ ಹಾವಳಿಗೆ ಬೇಸತ್ತ ಹಾಸನ ಜನರು ಇದೀಗ ಕಾಡಾನೆಗಳನ್ನು ಗುಂಡಿಗೆ ಬೀಳಿಸಲು ಖೆಡ್ಡಾ ತೋಡುತ್ತಿರುವ ಘಟನೆ ಸಕಲೇಶಪುರದ ಬೆಳಗೋಡಿನ ಹೊಸಕೊಪ್ಪಲು ಬಳಿ ನಡೆದಿದೆ.

ಅನೇಕ ತಿಂಗಳುಗಳಿಂದ ಕಾಡಾನೆಗಳು ಹಾಸನ ಭಾಗದಲ್ಲಿ ವಿಪರೀತವಾಗಿ ಕಂಡುಬರುತ್ತಿದ್ದು, ಗ್ರಾಮದ ಜನರ ಕಾಫಿ ಬೆಳೆ ಸೇರಿದಂತೆ ಜಮೀನು, ಕೃಷಿಭೂಮಿಗಳನ್ನು ಹಾಳು ಮಾಡುತ್ತಿದ್ದವು. ಆದರೆ ಈ ಬಗ್ಗೆ ಅರಣ್ಯಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾದ ಕಾರಣ ಜನರು ಖುದ್ದಾಗಿ ಆನೆಗಳಿಗೆ ಖೆಡ್ಡಾ ತೋಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೊಸಕೊಪ್ಪಲು ಕಾಫಿ ಬೆಳೆಗಾರರಿಂದ ಖೆಡ್ಡಾ ತೆಗೆಯುವ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ಆದ್ದರಿಂದ ಕೇವಲ ಪೊಲೀಸ್​ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಆನೆಗಳ ಪ್ರಾಣ ಹೋದರೆ ಹೋಗಲಿ ಎಂಬಂತೆ ಜೆಸಿಬಿ ಮೂಲಕ ಗುಂಡಿಗಳನ್ನು ತೆಗೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net