More

    ಕೆನಡಾದಲ್ಲಿ ನಿಗೂಢವಾಗಿ ಪ್ರಾಣ ಕಳೆದುಕೊಂಡ ಭಾರತೀಯ..!

    ನವದೆಹಲಿ: ಜಲಂಧರ್‌ನ ಸಿಧುಪುರ್ ಗ್ರಾಮದ ಯುವಕ ಕೆನಡಾದ ನಗರದಲ್ಲಿರುವ ತನ್ನ ಮನೆಯಿಂದ ಕಾಣೆಯಾಗಿದ್ದ. ಇದಾದ ಆರು ದಿನಗಳ ನಂತರ ಕೆನಡಾದ ಕ್ಯಾಲ್ಗರಿಯಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ.

    ಮೃತರನ್ನು ಜಸ್ಕರನ್ ಜೋಸನ್ (22) ಎಂದು ಗುರುತಿಸಲಾಗಿದೆ. ಅವರು ಐದಾರು ವರ್ಷಗಳ ಹಿಂದೆ ಉನ್ನತ ವ್ಯಾಸಂಗಕ್ಕಾಗಿ ಕೆನಡಾಕ್ಕೆ ಹೋಗಿದ್ದರು. ನಂತರ ಅಲ್ಲಿ ಖಾಯಂ ನಾಗರೀಕತ್ವವನ್ನು ಪಡೆದುಕೊಂಡ ನಂತರ ಉದ್ಯಮಿಯಾಗಿದ್ದರು.

    ಅವರ ತಂದೆ, ಜಸ್ವಂತ್ ಸಿಂಗ್ ಜೋಸನ್, ಭೂಮಾಲೀಕರು ಮತ್ತು ಲೋಹಿಯಾನ್ ಖಾಸ್ ಮಾರುಕಟ್ಟೆ ಸಮಿತಿಯ ಉಪಾಧ್ಯಕ್ಷರೂ ಆಗಿದ್ದಾರೆ. ಜಸ್ಕರನ್ ತಂದೆ ತಾಯಿಗೆ ಇದ್ದ ಒಬ್ಬನೇ ಮಗ.

    ಜಸ್ಕರನ್ ವಾಸವಿದ್ದ ಮನೆಯ ಮಾಲೀಕರು, ಆತ ಒಂದೆರಡು ದಿನಗಳಿಂದ ಮನೆಗೆ ಹಿಂತಿರುಗದ ನಂತರ ಮಾಹಿತಿ ನೀಡಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಆತ ತನ್ನ ಸ್ನೇಹಿತರೊಂದಿಗೆ ಅಥವಾ ವ್ಯಾಪಾರಕ್ಕಾಗಿ ಪ್ರವಾಸಕ್ಕೆ ಹೋಗಿರಬಹುದು ಎಂದು ಮನೆಯವರು ಆರಂಭದಲ್ಲಿ ಭಾವಿಸಿದ್ದರು. ಆದರೆ ಆತನನ್ನು ಫೋನ್‌ನಲ್ಲಿ ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಕುಟುಂಬಿಕರು ಚಿಂತಿತರಾಗಿದ್ದರು. ನಂತರ ಅವರಯ ಪೊಲೀಸರಲ್ಲಿ ದೂರು ದಾಖಲಿಸಲು ಜಮೀನುದಾರನನ್ನು ಹೇಳಿದ್ದಾರೆ.

    ಕೆನಡಾದ ಪೊಲೀಸರು ಜಸ್ಕರನ್ ಫೋನ್ ಸ್ಥಳವನ್ನು ಆಧರಿಸಿ ಪಾರ್ಕಿಂಗ್ ಪ್ರದೇಶದಲ್ಲಿ ಅವರ ಕಾರಿನೊಳಗೆ ಅವರ ದೇಹವನ್ನು ಪತ್ತೆಹಚ್ಚಿದರು. ಅವರು ತಮ್ಮ ಕ್ಯಾಲ್ಗರಿಯ ಮನೆಯಿಂದ ಸುಮಾರು 15 ಕಿಮೀ ದೂರದಲ್ಲಿ ಶವವಾಗಿ ಪತ್ತೆಯಾಗಿದೆ.

    “ಅವನಿಗೆ ಏನಾಯಿತು ಎಂದು ನಮಗೆ ಗೊತ್ತಿಲ್ಲ. ಈಗ ಮರಣೋತ್ತರ ಪರೀಕ್ಷೆಯ ವರದಿ ಅವನ ಸಾವಿಗೆ ಕಾರಣವನ್ನು ಬಹಿರಂಗಪಡಿಸಬಹುದು” ಎಂದು ಸೋದರ ಸಂಬಂಧಿ ಹೇಳಿದ್ದಾರೆ.

    ಇತ್ತೀಚೆಗೆ ಇಬ್ಬರು ವ್ಯಕ್ತಿಗಳು ಜಸ್ಕರನ್​ಗೆ ಕ್ರಮವಾಗಿ 30,000 ಕೆನಡಿಯನ್​ ಡಾಲರ್​ ಮತ್ತು 60,000 ಕೆನಡಿಯನ್​ ಡಾಲರ್​ಅನ್ನು ವಂಚಿಸಿದ್ದರು ಎಂದು ತಿಳಿದು ಬಂದಿದೆ. “ಕುಟುಂಬ ಚೆನ್ನಾಗಿದ್ದು ಹಣ ಕಳೆದುಕೊಂಡ ಬಗ್ಗೆ ಚಿಂತಿಸಬೇಡ ಎಂದು ಅವನಿಗೆ ಕುಟುಂಬಿಕರು ಹೇಳಿದ್ದರು. ‘ನಾವು ಅವನಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಿದ್ಧರಿದ್ದೇವೆ, ಎಂದು ಹೇಳಿದ್ದರು. ಆದರೂ ದುರದೃಷ್ಟವಶಾತ್​ ಈತ ಪ್ರಾಣ ಕಳೆದುಕೊಂಡಿದ್ದಾನೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts