ತುಟಿಯ ಒಳಗೆ, ಒಸಡಿನ ಮೇಲೆ ಟ್ಯಾಟೂ; ಹುಚ್ಚುತನವನ್ನು ಕಂಡು ಬಿದ್ದು ಬಿದ್ದು ನಕ್ಕ ನೆಟ್ಟಿಗರು..

tatto
Published on

ನವದೆಹಲಿ: ಇಂದಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಫ್ಯಾಷನ್​​ ಆಗಿದೆ. ತಾವಿ ಇಟ್ ಪಡುವ ವ್ಯಕ್ತಿಗಳ ಹೆಸರು, ಭಾವಚಿತ್ರ ಹಾಗೂ ಕೆಲವು ಚಿತ್ರಗಳನ್ನು ದೇಹದ ಭಾಗಗಳ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ಯುವಕನೊಬ್ಬ ಪ್ರೇಯಸಿಯ ಹೆಸರನ್ನು ಒಳ ತುಟಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದನು. ಈ ವಿಡಿಯೋ ವೈರಲ್‌ ಆಗಿತ್ತು. ಆದರೆ ಇದೆ ಬೆನ್ನಲ್ಲೆ ಇಲ್ಲೊಬ್ಬಳು ಒಸಡಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾಳೆ.

ಕೈ, ಕಾಲು, ಎದೆಯ ಮೇಲೆ, ಬೆನ್ನಿನ ಮೇಲೆಲ್ಲಾ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಯುವತಿಯ ಒಸಡಿನ ಮೇಲೆ ಟ್ಯಾಟೂ ಹಾಕುತ್ತಿರುವುದನ್ನು ಕಾಣಬಹುದು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಯುವತಿಯ ಒಸಡಿನ ಮೇಲೆ ಟ್ಯಾಟೂ ಹಾಕುತ್ತಿರುವ ವಿಡಿಯೋಗೆ ನೆಟ್ಟಿಗರು ಕಾಮೆಂಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೈಸರ್ಗಿಕ ಸೌಂದರ್ಯವನ್ನು ಏಕೆ ಹಾಳು ಮಾಡುತ್ತಿದ್ದೀರಿ? ಎಂದು ನೆಟ್ಟಿಗರೊಬ್ಬರು ಕಾಮೆಂಟ್​​ ಮಾಡಿದ್ದಾರೆ. ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಕಂಡಿದೆ.

ಕೆಲವು ದಿನಗಳ ಹಿಂದೆ ವೈರಲ್​​ ಆಗಿದ್ದ ಇಂತಹದ್ದೆ ವಿಡಿಯೋದಲ್ಲಿ ಯುವಕ ತನ್ನ ಪ್ರೇಯಸಿಯ ಹೆಸರನ್ನು ತುಟಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದನು. ವೈರಲ್ ವಿಡಿಯೋದಲ್ಲಿ ಮೊದಲು ಟ್ಯಾಟೂ ಕಲಾವಿದ ಯುವಕ ತುಟಿಯ ಒಳಭಾಗದಲ್ಲಿ ಅಮೃತ ಅನ್ನೋ ಹಸರನ್ನು ಬರೆದು, ನಂತರ ಆ ಹೆಸರಿನ ಮೇಲೆ ಹಚ್ಚೆಯನ್ನು ಬಿಡಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಅನೇಕರು ಈತನ ಹುಚ್ಚುತನವನ್ನು ಕಂಡು ನಕ್ಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net