ಕೋತಿ ರಾಮುಗೆ ಮರುಗಿದ ಮಕ್ಕಳು; ಅನಾರೋಗ್ಯಕ್ಕೆ ಒಳಗಾಗಿ ಸತ್ತ ಮಂಗಕ್ಕೆ ಅಂತ್ಯಸಂಸ್ಕಾರ..

Monkey F
Published on

ಉತ್ತರಕನ್ನಡ: ಕೋತಿಯೊಂದು ಅನಾರೋಗ್ಯಕ್ಕೀಡಾಗಿ ಸತ್ತಿದ್ದು, ಅದರ ಸಾವಿಗೆ ಮಕ್ಕಳ ಸಹಿತ ಊರಿನ ಜನರೇ ಮರುಗಿದ್ದಾರೆ. ಕೋತಿ ರಾಮು ಎಂದೇ ಕರೆಸಿಕೊಳ್ಳುತ್ತಿದ್ದ ಈ ಮಂಗನಿಗೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅಂತ್ಯಸಂಸ್ಕಾರವನ್ನೂ ನಡೆಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಕಂಜರಪೇಟೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಕಂಜರಪೇಟೆ ಗಲ್ಲಿಯ ರೆಹೋನೆತ್ ಎಂಬುವವರ ಮನೆಯಲ್ಲಿ ಸಾಕಿದ್ದ ಕೋತಿ ರಾಮು, ಎರಡು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಸಾವಿಗೀಡಾಗಿದೆ.

ಈ ಕೋತಿ ಮರಿಯ ಸಾವಿಗೆ ಗ್ರಾಮಸ್ಥರು ಮರುಗಿ ಕಣ್ಣೀರು ಹಾಕಿದ್ದಲ್ಲದೆ, ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನಡೆಸಿದ್ದಾರೆ. ಮರದಿಂದ ಮರಕ್ಕೆ ಹಾರುವಾಗ ಬಿದ್ದು ಗಾಯ ಮಾಡಿಕೊಂಡಿದ್ದ ಕೋತಿಗೆ ಈ ಹಿಂದೆ ಚಿಕಿತ್ಸೆ ಕೊಡಿಸಿದ್ದ ಗ್ರಾಮಸ್ಥರು, ಗುಣವಾದ ಮೇಲೆ ಅದನ್ನು ಕಾಡಿಗೆ ಬಿಟ್ಟಿದ್ದರು. ಅದಾಗ್ಯೂ ಗ್ರಾಮಕ್ಕೆ ವಾಪಸ್​ ಆಗಿದ್ದ ಈ ಕೋತಿಯನ್ನು ರೆಹೋನೆತ್ ಮನೆಯಲ್ಲಿ ಸಾಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net