ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಎಂದಿಗೂ ಹಣದ ಕೊರತೆಯೇ ಇರುವುದಿಲ್ಲ! ನಿಮ್ಮ ನಕ್ಷತ್ರ ಇದೇನಾ ನೋಡಿ… Birth of Stars

Birth of Stars
Published on

Birth of Stars: ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಎಂದಿಗೂ ಇದರ ಬೇಡಿಕೆಯಂತೂ ಕಡಿಮೆಯಾಗುವುದಿಲ್ಲ. ಹಣವಿದ್ದರೆ ಸಾಕು ಈ ಜಗತ್ತಿನಲ್ಲಿ ಏನು ಮಾಡಬೇಕಾದರೂ ಮಾಡಬಹುದು ಎಂದರೆ ಅತಿಶಯೋಕ್ತಿಯಲ್ಲ.

ಪ್ರಪಂಚದಾದ್ಯಂತ ಹಣವೇ ಪ್ರಮುಖ ಶಕ್ತಿಯಾಗಿದೆ. ವ್ಯಕ್ತಿಗಿಂತ ಹಣಕ್ಕೆ ಬೆಲೆ ಕೊಡುವವರ ಸಂಖ್ಯೆಯೇ ಹೆಚ್ಚು. ಇಂತಹ ಹಣವನ್ನು ಕೆಲವರು ಶ್ರಮದಿಂದ ಗಳಿಸಿದರೆ, ಕೆಲವರು ಅಕ್ರಮದ ಹಾದಿಯಲ್ಲಿ ಪಡೆಯುತ್ತಾರೆ. ಇನ್ನು ಕೆಲವರು ಅದೃಷ್ಟದ ಮೂಲಕ ತಮ್ಮದಾಗಿಸಿಕೊಳ್ಳುತ್ತಾರೆ. ಅದೃಷ್ಟ ಅಂತಾ ಬಂದಾಗ ಜ್ಯೋತಿಷ್ಯ ಪ್ರಮುಖ ಪಾತ್ರವಹಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಕೆಲವು ನಕ್ಷತ್ರಗಳಲ್ಲಿ ಜನಿಸಿದವರು ತಮ್ಮ ಜೀವನದ ಕೊನೆಯವರೆಗೂ ಹೆಚ್ಚಿನ ಸಂಪತ್ತಿನಿಂದ ಬದುಕುತ್ತಾರಂತೆ. ಈ ಪೋಸ್ಟ್​ನಲ್ಲಿ ಹಣದ ಯೋಗ ಇರುವವರು ಯಾವ ಯಾವ ನಕ್ಷತ್ರಗಳಲ್ಲಿ ಹುಟ್ಟುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.

ಅಶ್ವಿನಿ

ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಸ್ವಾಭಾವಿಕವಾಗಿ ಆಕರ್ಷಕರಾಗಿರುತ್ತಾರೆ ಮತ್ತು ಮೊದಲ ನೋಟದಲ್ಲಿ ಇತರರನ್ನು ಆಕರ್ಷಿಸುವ ಕಾಂತೀಯ ನೋಟವನ್ನು ಹೊಂದಿರುತ್ತಾರೆ. ಅವರು ಜೀವನದಲ್ಲಿ ಎಲ್ಲ ರೀತಿಯ ಪ್ರಾಪಂಚಿಕ ಸಂತೋಷಗಳಿಂದ ಆಶೀರ್ವದಿಸಲ್ಪಡುತ್ತಾರೆ. ವಿಶೇಷವಾಗಿ ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ಗಂಡನ ಮನೆಯಲ್ಲಿ ರಾಣಿಯಂತೆ ಜೀವನವನ್ನು ನಡೆಸುತ್ತಾರೆ. ಹಣ ಮತ್ತು ಕೀರ್ತಿ ಒಂದಲ್ಲ ಒಂದು ರೂಪದಲ್ಲಿ ಇವರನ್ನು ಹುಡುಕೊಂಡು ಬರುತ್ತದೆಯಂತೆ.

Birth of Stars

ಕೃತಿಕಾ

ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಸೂರ್ಯನಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ಎಲ್ಲಿಗೆ ಹೋದರೂ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇದರ ಅಧಿಪತಿ ಶುಕ್ರನಾಗಿರುವುದರಿಂದ ಈ ನಕ್ಷತ್ರಗಳಲ್ಲಿ ಜನಿಸಿದವರು ತಮ್ಮ ಜೀವನದುದ್ದಕ್ಕೂ ಸೂರ್ಯ ಮತ್ತು ಶುಕ್ರನ ಸಂಪೂರ್ಣ ಆಶೀರ್ವಾದವನ್ನು ಪಡೆಯುತ್ತಾರೆ. ಅವರ ಜೀವನದಲ್ಲಿ ಸಂಪತ್ತಿನ ಯಾವುದೇ ಕೊರತೆ ಇರುವುದಿಲ್ಲ. ರಾಜಮನೆತನದವರಂತೆ ಯೋಗ ಜೀವನ ನಡೆಸುತ್ತಾರೆ.

Birth of Stars

ಮೃಗಶಿರಾ

ಮೃಗಶಿರಾ ನಕ್ಷತ್ರದ ಅಧಿಪತಿ ಮಂಗಳನಾಗಿದ್ದರೂ ಶುಕ್ರನ ಕೃಪೆಯು ಇರುವುದರಿಂದ ಈ ರಾಶಿಯವರು ಜೀವನ ಪರ್ಯಂತ ಅದ್ಧೂರಿಯಾಗಿ ಬದುಕುವ ಯೋಗವಿರುತ್ತದೆ. ಈ ನಕ್ಷತ್ರದವರು ತಮ್ಮ ಜೀವನದಲ್ಲಿ ಆರ್ಥಿಕ ತೊಂದರೆಗಳನ್ನು ಅನುಭವಿಸುವುದು ಬಹಳ ಅಪರೂಪ. ಸಂಪತ್ತು ಮತ್ತು ಸಮೃದ್ಧಿಯಿಂದ ಬದುಕಲು ಜನಿಸಿದವರಂತೆ ಜೀವನದಲ್ಲಿ ಎಲ್ಲ ಸಂತೋಷಗಳನ್ನು ಈ ನಕ್ಷತ್ರದವರು ಅನುಭವಿಸುತ್ತಾರೆ.

Birth of Stars
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net