

Life Secrets: ಜೀವನದಲ್ಲಿ ಕೆಲವು ವಿಷಯಗಳನ್ನು ರಹಸ್ಯವಾಗಿಡುವುದು ತುಂಬಾ ಒಳಿತು. ಕೆಲವು ರಹಸ್ಯಗಳನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಯುವ ಹಂತಕ್ಕೂ ಬಂದರೂ ಈ ರಹಸ್ಯಗಳನ್ನು ಯಾರಿಗೂ ಹೇಳಬೇಡಿ. ಅಂದಹಾಗೆ ಯಾರಿಗೂ ಹೇಳದೆ ಮುಚ್ಚಿಡಬೇಕಾದ ವಿಷಯಗಳು ಯಾವುವು ಎಂಬುವನ್ನು ನಾವೀಗ ತಿಳಿದುಕೊಳ್ಳೋಣ.
ಗಂಡ-ಹೆಂಡತಿ ಎಂಬುದು ಒಂದು ಪವಿತ್ರ ಸಂಬಂಧ. ದಂಪತಿ ತಮ್ಮ ಬದುಕಿನ ಉದ್ದಕ್ಕೂ ಜತೆಯಾಗಿಯೇ ಹೆಜ್ಜೆ ಹಾಕುತ್ತಾರೆ. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸುತ್ತಾರೆ. ದಂಪತಿ ನಡುವೆ ಅನೇಕ ವಿಷಯಗಳಿರುತ್ತವೆ. ಅವುಗಳಲ್ಲಿ ಕೋಪ, ಮನಸ್ತಾಪ ಮತ್ತು ಜಗಳವೂ ಕೂಡ ಒಂದು. ಜಗಳ ಅಥವಾ ವೈಮನಸ್ಸಿದ್ದರೆ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಒಂದು ವೇಳೆ ಹಂಚಿಕೊಂಡಲ್ಲಿ ನಿಮ್ಮಂಥ ಮೂರ್ಖರು ಬೇರೆ ಯಾರು ಇರುವುದಿಲ್ಲ. ಸಂಸಾರದ ಗುಟ್ಟು ಗುಟ್ಟಾಗಿಯೇ ಇರಬೇಕು. ಹೊರಗೆ ಬಂದರೆ ಅದನ್ನು ಆಡಿಕೊಂಡು ನಗುವವರು ಇರುತ್ತಾರೆ. ನಿಮ್ಮ ಮೇಲಿನ ಅವರ ಅಭಿಪ್ರಾಯವೂ ಕೂಡ ಬದಲಾಗುತ್ತದೆ.
ಇನ್ನು ಯಾವುದೇ ಸಂದರ್ಭದಲ್ಲೂ ನಿಮ್ಮ ಆದಾಯದ ಬಗ್ಗೆ ಯಾರಿಗೂ ಹೇಳಬೇಡಿ. ಅದು ಸ್ನೇಹಿತರಾಗಿರಲಿ ಅಥವಾ ಸಂಬಂಧಿಕರಾಗಿರಲಿ, ನಿಮ್ಮ ಆದಾಯದ ಬಗ್ಗೆ ಹೇಳಬೇಡಿ. ಅದೇ ರೀತಿ ದಾನ ಮಾಡಿದ ನಂತರವೂ ಅದನ್ನು ಹೇಳಿಕೊಳ್ಳಬಾರದು. ಬಲಗೈಯಿಂದ ಮಾಡಿದ ದಾನ ಎಡಗೈಗೂ ತಿಳಿಯಬಾರದು ಎಂಬ ಮಾತಿದೆ. ಅದರಂತೆ ನಡೆದುಕೊಂಡರೆ ಒಳಿತು.
ಇನ್ನು ನಮ್ಮಲ್ಲಿರುವ ಮಂತ್ರವನ್ನು ಸಹ ಯಾರಿಗೂ ಹೇಳಬಾರದು. ಹಾಗೇ ನಮ್ಮ ವಯಸ್ಸನ್ನು ಸಹ ಯಾರಿಗೂ ಹೇಳಬಾರದು. ನಾವು ಎಂದಾದರೂ ಗೌರವ ಅಥವಾ ಸನ್ಮಾನವನ್ನು ಸ್ವೀಕರಿಸಿದರೆ, ಅದರ ಬಗ್ಗೆ ಯಾರಿಗೂ ಹೇಳಬಾರದು. ನಮ್ಮ ಆಸ್ತಿ ಅಥವಾ ನಾವು ಬಳಸುವ ಮಾದಕ ದ್ರವ್ಯಗಳ ಬಗ್ಗೆಯೂ ಯಾರಿಗೂ ಹೇಳಬಾರದು.
ಈ ಮೇಲಿನ ಎಲ್ಲ ವಿಚಾರಗಳಲ್ಲಿ ಗೌಪ್ಯತೆ ತುಂಬಾ ಒಳ್ಳೆಯದು. ಇವುಗಳನ್ನು ಎಂದಿಗೂ ನಾಲ್ಕು ಜನರೊಂದಿಗೆ ಹಂಚಿಕೊಳ್ಳಲೇಬೇಡಿ. ಒಂದು ವೇಳೆ ಹಂಚಿಕೊಂಡರೆ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ. (ಏಜೆನ್ಸೀಸ್)