

ಬೆಂಗಳೂರು: ನಿಗದಿತ ಸಮಯಕ್ಕಿಂತ 5 ನಿಮಿಷ ಹೆಚ್ಚು ಹೊತ್ತು ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇದ್ದಿದ್ದಕ್ಕೆ ಯುವಕನೊಬ್ಬ ದಂಡ ಕಟ್ಟಿರುವ ಟನೆ ಇತ್ತೀಚೆಗೆ ನಡೆದಿದೆ. ಮೊಬೈಲ್ನಲ್ಲಿ ಚಾರ್ಜ್ ಮುಗಿದ ಕಾರಣ ವಿಜಯನಗರ ನಿಲ್ದಾಣದಲ್ಲಿ ಚಾರ್ಜ್ ಹಾಕಿಕೊಂಡಿದ್ದ. ಬಳಿಕ ಪ್ರಯಾಣಕ್ಕೆ ಮುಂದಾದಾಗ ದಂಡ ಕಟ್ಟುವಂತೆ ಮೆಟ್ರೋ ಸಿಬ್ಬಂದಿಗಳು ಸೂಚಿಸಿದ್ದಾರೆ.
ಮಳೆ ಬರುತ್ತಿದ್ದು, ಚಾರ್ಜ್ ಕಡಿಮೆ ಇದ್ದ ಕಾರಣ ಸ್ವಲ್ಪ ಹೊತ್ತು ಜಾರ್ಜ್ ಮಾಡಿಕೊಂಡಿದ್ದೇನೆ ಎಂದರೂ ಸಿಬ್ಬಂದಿ ಮಾತ್ರ ದಂಡ ವಿಧಿಸಿದ್ದಾರೆ. ನಿಲ್ದಾಣದಲ್ಲಿ 20 ನಿಮಿಷವಷ್ಟೇ ಇರಲು ಅನುಮತಿ. ಕೇವಲ 1 ನಿಮಿಷ ಹೆಚ್ಚಾದರೂ ದಂಡ ಪಾವತಿಸಬೇಕು ಎಂದಿದ್ದಾರೆ. ಈ ಬಗ್ಗೆ ಯುವಕ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸದ್ಯ ಬಿಎಂಆರ್ಸಿಲ್ ಸಿಬ್ಬಂದಿ ನಡೆಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಿಯಮ ಆರಂಭದಿಂದಲೂ ಇದೆ. ಟಿಕೆಟ್ ಖರೀದಿಸಿ ನಿಲ್ದಾಣದಲ್ಲಿ ಸಮಯ ಕಳೆಯಬಾರದು ಎಂಬ ಕಾರಣಕ್ಕೆ ಈ ನಿಯಮ ಮಾಡಲಾಗಿದೆ ಎಂದು ಬಿಎಂಆರ್ಸಿಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.