ಅಮಿತ್ ಷಾಗೆ ಪತ್ರ ಬರೆದ ಪೇಜಾವರ ಮಠದ ಶ್ರೀ; ಹಿಂದೂ ದೇವಾಲಯ ಉಳಿಸಲು ಮನವಿ

pejawara
Published on

ಉಡುಪಿ: ಪೇಜಾವರ ಮಠದ ವಿಶ್ವಪ್ರಸನ್ನ‌ ತೀರ್ಥ ಸ್ವಾಮೀಜಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಪತ್ರ ಬರೆದಿದ್ದಾರೆ. ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಅವರು ಪತ್ರ ಬರೆದಿದ್ದಾರೆ.

ಇತ್ತಿಚೆಗೆ ಆಂಧ್ರ ಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಸಾಕಷ್ಟು ದಾಳಿಯಾಗುತ್ತಿದೆ. ಆದರೆ ಆಂಧ್ರಪ್ರದೇಶದ ಸರ್ಕಾರ ಅದನ್ನು ತಡೆಯುವಲ್ಲಿ ವಿಫಲವಾಗಿದೆ. ಉದ್ದೇಶ ಪೂರ್ವಕವಾಗಿಯೇ ಆಂಧ್ರ ಸರ್ಕಾರ ದೌರ್ಜನ್ಯವನ್ನು ತಡೆಯುತ್ತಿಲ್ಲ ಎಂದು ಶ್ರೀಗಳು ಪತ್ರದಲ್ಲಿ ಆರೋಪಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

ರಾಮ ತೀರ್ಥ ದೇವಸ್ಥಾನಕ್ಕೆ ಸ್ವಾಮೀಜಿ ಭೇಟಿ ಕೊಟ್ಟ ನಂತರ ಅಮಿತ್ ಷಾಗೆ ಪತ್ರ ಬರೆಯಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net