ಕಾಲೇಜು ಯುವಕರಿಗೆ ಡ್ರಗ್ಸ್​ ಮಾರಲು ಯತ್ನಿಸುತ್ತಿದ್ದ 21 ವರ್ಷದ ಪೆಡ್ಲರ್​ ಅಂದರ್​..!​

drugs charas
Published on

ನೆಲಮಂಗಲ: ನಗರದಲ್ಲಿ ಕಾಲೇಜು ಯುವಕರನ್ನು ಟಾರ್ಗೆಟ್ ಮಾಡುತ್ತಾ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಡ್ರಗ್ ಪೆಡ್ಲರ್​ನನ್ನು ಬಂಧಿಸುವಲ್ಲಿ ನೆಲಮಂಗಲ ಟೌನ್‌ ಪೊಲೀಸರು ಯಶಸ್ವಿಯಾಗಿದ್ದಾರೆ.‌ ಈತ ಕಾಲೇಜು ಯುವಕರ ಜೊತೆಗೆ ಕಾರ್ಮಿಕರು, ಲಾರಿ ಚಾಲಕರು ಹೀಗೆ ಕಠಿಣ ಶ್ರಮ ಇರುವ ವೃತ್ತಿಗಳಲ್ಲಿ ತೊಡಗಿಸಿಕೊಂಡವರಿಗೂ ಮಾದಕವಸ್ತುವನ್ನು ಮಾರಲು ಪ್ರಯತ್ನಿಸುತ್ತಿದ್ದ.

ನೆಲಮಂಗಲ ನಗರದಲ್ಲಿರುವ ವಿಶ್ವೇಶ್ವರಪುರದ ಕನಕದಾಸ ವೃತ್ತದ ಬಳಿ ಬೆಂಗಳೂರು ಡಿ.ಜೆ ಹಳ್ಳಿಯ ತಾರಾ ದತ್ ಮಿಶ್ರಾ (21) ಎಂಬಾತ ಮಾದಕವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ನೆಲಮಂಗಲ ಟೌನ್ ವೃತ್ತನಿರೀಕ್ಷಕ ಶಶಿಧರ್ ಮತ್ತು ತಂಡ ಸ್ಥಳಕ್ಕೆ ಧಾವಿಸಿ ಮಾಲು ಸಹಿತ ಆರೋಪಿಯನ್ನ ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು 1ಲಕ್ಷ ಮೌಲ್ಯದ 290 ಗ್ರಾಂನಷ್ಟು ಚರಸ್​ಅನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಚಾರಣೆ ನೆಡೆಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ನೆಲಮಂಗಲ ಟೌನ್ ಪೊಲೀಸರು ಸದ್ಯ ಆರೋಪಿಯನ್ನು ಜೈಲಿಗೆ ಅಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net