ಪ್ರಧಾನಿ ಮೋದಿಯ ತಾಯಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಗಂಭೀರ..!

ಹಿರಅಬೆನ ಮೊದಿ
Published on

ಅಹಮದಾಬಾದ್​: ಪ್ರಧಾನಿ ಮೋದಿಯವರ ತಾಯಿ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿಯ ಆರೋಗ್ಯ ಬುಧವಾರ ಹದಗೆಟ್ಟಿದ್ದರಿಂದ ಅವರನ್ನು ಅಹಮದಾಬಾದ್‌ನ ಅಪೋಲೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ನಿನ್ನೆ ತಾನೆ ಮೈಸೂರು ಬಳಿ ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಇದಾಗಿ ಒಂದು ದಿನದ ನಂತರ ಹಿರಾಬೆನ್​ ಮೋದಿತಯವರ ಆರೋಗ್ಯ ಹದಗೆಟ್ಟಿದೆ ಸದ್ಯ ಹೀರಾಬೆನ್ ಮೋದಿ, ಆಸ್ಪತ್ರೆಗೆ ದಾಖಲಾಗಿದ್ದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಅವರ ಪ್ರಧಾನ ಕಾರ್ಯದರ್ಶಿ ಅಪೋಲೋ ಆಸ್ಪತ್ರೆಗೆ ತಲುಪಿದ್ದಾರೆ. ಇಂದು ಸಂಜೆ ತಮ್ಮ ತಾಯಿಯ ಆರೋಗ್ಯವನ್ನು ವಿಚಾರಿಸಲು ಪ್ರಧಾನಿ ಮೋದಿ ಆಸ್ಪತ್ರೆಗೆ ತೆರಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net