ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಶಪಥದಿಂದ ವಿಮುಕ್ತ..!

sriramasene
Published on

ಚಿಕ್ಕಮಗಳೂರು: ನಾಲ್ಕು ವರ್ಷಗಳ ಹಿಂದೆ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಮಾಡಿದ್ದ ಶಪಥ ಕಡೆಗೂ ಪೂರ್ಣಗೊಂಡಿದೆ.

'ಅರ್ಚಕರ ನೇಮಕ ಆಗಿ ದೇವರ ವಿಗ್ರಹ ಮೆರವಣಿಗೆ ಆಗುವವರೆಗೂ ನಾನು ಮುಡಿ ತೆಗೆಯೋದಿಲ್ಲ ಎಂದು ಶಪಥ ಮಾಡಿದ್ದರು. ಡಿ.3ರಂದು ಹೈಕೋರ್ಟ್​ ದತ್ತಮಂದಿರಕ್ಕೆ ಅರ್ಚಕರ ನೇಮಕ ಮಾಡಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಹಿಂದು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಧ್ಯಕ್ಷ ಗಂಗಾಧರ ಕುಲಕರ್ಣಿ ದತ್ತಪೀಠದಲ್ಲಿ ಮುಡಿ ಕೊಟ್ಟು ತಮ್ಮ ಶಪಥ ಪೂರೈಸಿದ್ದಾರೆ. ಇದೀಗ ಅವರು ಐಡಿ ಪೀಠದ ಹೋಮ ಮಂಟಪದ ಸಮೀಪದ ಮುಡಿ ಅರ್ಪಣೆ ಮಾಡಿದ್ದು ಈ ಸಂದರ್ಭ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿ ಹಲವರು ಭಾಗಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net