

ಬೆಂಗಳೂರು: ರಸ್ತೆ ದಾಟುವಾಗ ಶ್ರೀನಿವಾಸ ಟ್ರಾವೆಲ್ಸ್ ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪಂತರಪಾಳ್ಯದ ಮಂಜುನಾಥ್ (28) ಮೃತ ಪಾದಚಾರಿ. ಈ ಘಟನೆ ಸಂಬಂಧ ಶ್ರೀನಿವಾಸ ಟ್ರಾವಲ್ಸ್ ಬಸ್ ಚಾಲಕ ಮುತ್ತಕುಮಾರ್‌ನನ್ನು ವಶಕ್ಕೆ ಪಡೆಯಲಾಗಿದೆ. ಬಸಪ್ಪ ಸರ್ಕಲ್ ಬಳಿ ಸೋಮವಾರ ರಾತ್ರಿ ಮಂಜುನಾಥ್ ರಸ್ತೆ ದಾಟುವಾಗ ಈ ಅವಘಡ ಸಂಭವಿಸಿದೆ.
ಪಂತರಪಾಳ್ಯದಲ್ಲಿ ನೆಲೆಸಿದ್ದ ಮಂಜುನಾಥ್, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮನೆಗೆ ತೆರಳಲು ರಸ್ತೆ ದಾಟುವಾಗ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಟಿ ಮಾರ್ಕೆಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.