ಜಿಪಿಎಸ್​ನಲ್ಲಿ ಪುರುಷನ ಚಿತ್ರ ಬಿಡಿಸಿದ 'ಪೆಡಲಿಂಗ್​ ಪಿಕಾಸೋ'! ಸೈಕಲ್​ ಸವಾರಿಯಲ್ಲಿ ದಾಖಲೆ

picasso
Published on

ಲಂಡನ್​​: 'ಪೆಡಲ್ಲಿಂಗ್​ ಪಿಕಾಸೋ' ಎಂಬ ಐತಿಹಾಸಿಕ ಚಿತ್ರಕಲಾವಿದ ಪಿಕಾಸೋ ಹೆಸರಿನ ಬಿರುದು ಪಡೆದಿರುವ ಇಂಗ್ಲೆಂಡಿನ ಸೈಕಲ್ ಸವಾರ ಆ್ಯಂಥೋನಿ ಹೊಯ್ಟೆ ಹೊಸತೊಂದು ದಾಖಲೆ ನಿರ್ಮಿಸಿದ್ದಾರೆ. ಲಂಡನ್​ನ ರಸ್ತೆಗಳಲ್ಲಿ 12 ಗಂಟೆಗಳ ಕಾಲ ನಿರಂತರವಾಗಿ ಬೈಸಿಕಲ್​ ತುಳಿದು ಅತಿದೊಡ್ಡ ಜಿಪಿಎಸ್​ ಚಿತ್ರವನ್ನು ಬಿಡಿಸಿದ್ದಾರೆ.

ಲಂಡನ್​ನ ರಸ್ತೆಗಳಲ್ಲಿ ಒಂದೇ ಸಮನೇ 12 ಗಂಟೆಗಳ ಕಾಲ 107 ಕಿಲೋಮೀಟರ್​ಗಳ ದಾಖಲೆ ದೂರವನ್ನು ಸೈಕಲ್​ ಮೇಲೆ ಕ್ರಮಿಸಿರುವ ಹೊಯ್ಟೆ, ಜಿಪಿಎಸ್​ನಲ್ಲಿ ಮೀಸೆಯುಳ್ಳ ಪುರುಷನ ಚಿತ್ರ ಮೂಡುವಂತೆ ಮಾಡಿದ್ದಾರೆ. ಅವರ ಈ ವಿಶೇಷ ಸಾಧನೆಯು ಪುರುಷರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ 'ಮೊವೆಂಬರ್​​' ಎಂಬ ಫಂಡ್​ ರೈಸಿಂಗ್​ ಕಾರ್ಯಕ್ರಮಕ್ಕಾಗಿ ನಡೆಯಿತು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net