ಗಾಯನದತ್ತ ಪಾಯಲ್ ಚಿತ್ತ : 42ನೇ ವಯಸ್ಸಿನಲ್ಲಿ ಸಿಂಗಿಂಗ್ ಕಲಿಯಲು ಕೈಲಾಶ್ ಖೇರ್ ಅಕಾಡೆಮಿ ಸೇರಿದ ನಟಿ

ಪಾಯಲ್ ರೋಹಟಗಿ
ಪಾಯಲ್ ರೋಹಟಗಿ
Published on

ಪ್ರಮುಖ ಮುಖ್ಯಾಂಶಗಳು

  • ತೌಬಾ ತೌಬಾ ನಟಿ ಮದುವೆ ಬಳಿಕ ಬಣ್ಣದ ಲೋಕದಿಂದ ದೂರ
  • ಪತಿಯ ಉದ್ಯಮದಲ್ಲಿ ತೊಡಗಿಸಿಕೊಂಡ ನಟಿ
  • ಇದೀಗ ಕೈಲಾಶ್ ಖೇರ್ ಆಕಾಡೆಮಿಯಲ್ಲಿ ಗಾಯನ ಕಲಿಯುತ್ತಿರುವ ನಟಿ
ಪ್ರತಿ ಕಲಾವಿದರಿಗೆ ಬಹುಮುಖಿಯಾಗಿ ಗುರುತಿಸಿಕೊಳ್ಳುವ ಆಸೆ ಇರುತ್ತದೆ. ನಟನೆಯ ಜತೆಗೆ ಡಾನ್ಸ್, ಗಾಯನ, ಫೈಟ್ ಹೀಗೆ ನಾನಾ ಸಾಹಸಗಳನ್ನು ಕಲಿತು, ಬಹುಮುಖ ಪ್ರತಿಭೆ ಪ್ರದರ್ಶಿಸುತ್ತಾರೆ. ಇನ್ನು ಇಲ್ಲೊಬ್ಬ ನಟಿ ತಮ್ಮ 42ನೇ ವಯಸ್ಸಿನಲ್ಲಿ ಗಾಯನ ಕಲಿಯಲು ಮುಂದಾಗಿದ್ದು, ಕಲಿಕೆಗೆ ವಯಸ್ಸಿನ ಗಡಿ ಇಲ್ಲ ಎಂದು ಸಾರಿದ್ದಾರೆ. ಹೌದು, ‘ತೌಬಾ ತೌಬಾ’, ‘ಕಾರ್ಪೊರೇಟ್’, ‘ಹೇ ಬೇಬಿ’ ಸೇರಿ ಹಿಂದಿ, ತೆಲುಗು, ಭೋಜಪುರಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಪಾಯಲ್ ರೋಹಟ್ಗಿಗೆ ಸಲ್ಲುತ್ತದೆ. ಜತೆಗೆ ಕೆಲ ಚಿತ್ರಗಳಲ್ಲಿ ವಿಶೇಷ ಸಾಂಗ್‌ಗಳಿಗೆ ಡಾನ್ಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಂತಹ ಪಾಯಲ್ 2022ರಲ್ಲಿ ಸಂಗ್ರಾಮ್ ಸಿಂಗ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದಾರೆ. ಆ್ಯಕ್ಟಿಂಗ್‌ನಿಂದ ದೂರವಾದರೂ ಕಲೆಯನ್ನು ಬಿಟ್ಟುಕೊಡದ ಅವರು ಇದೀಗ ಗಾಯಕಿಯಾಗುವ ಕನಸು ಕಂಡಿದ್ದಾರೆ. ಅದಕ್ಕಾಗಿ ಖ್ಯಾತ ಗಾಯಕ ಕೈಲಾಶ್ ಖೇರ್ ಅಕಾಡೆಮಿ ಸೇರಿದ್ದಾರೆ. ‘ಮೊದಲು ‘ಕಾರ್ಪೊರೇಟ್’ ಚಿತ್ರದ ವಿಶೇಷ ಸಾಂಗ್‌ಗೆ ಡಾನ್ಸ್ ಮಾಡಿದಾಗ ನನಗೆ ಸರಿಯಾಗಿ ನೃತ್ಯ ಬರುತ್ತಿರಲಿಲ್ಲ. ಆ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ಬಳಿಕ ಕಥಕ್ ಕಲಿತೆ. ಆಗ ಮತ್ತಷ್ಟು ಅವಕಾಶಗಳು ಹೆಚ್ಚಿದವು. ಈಗಾಗಲೇ ನಟನೆ, ಡಾನ್ಸ್, ಜತೆಗೆ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದೇನೆ. ಅದರ ಜತೆಜತೆಗೆ ಹೊಸದನ್ನು ಕಲಿಯುವ ಹಂಬಲದಿಂದ ಕೈಲಾಶ್ ಖೇರ್ ಆಕಾಡೆಮಿ ಸೇರಿದ್ದು, ಗಾಯನ ಕಲಿಯುತ್ತಿದ್ದೇನೆ. ಆ ಮೂಲಕ ಪ್ರತಿಭೆಯನ್ನು ವಿಸ್ತರಿಸಿಕೊಳ್ಳುತ್ತಿದ್ದೇನೆ. ಈಗಾಗಲೇ ಕಲ್ಯಾಣ್, ದುರ್ಗಾ, ಭೈರವ, ಭೈರವಿ ಹೀಗೆ ಕೆಲ ರಾಗಗಳನ್ನು ಕಲಿತಿದ್ದೇನೆ. ಮುಂದೆ ಬಾಲಿವುಡ್‌ನಲ್ಲಿ ಹಾಡಲು ಅವಕಾಶ ಸಿಕ್ಕರೆ ಖಂಡಿತ ಹಾಡುತ್ತೇನೆ’ ಎಂದು ಪಾಯಲ್ ಭರವಸೆ ವ್ಯಕ್ತಪಡಿಸುತ್ತಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net