

Pawan kalyan : ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್, ಸಿಂಗಾಪುರದ ಶಾಲೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ನಟ ಚಿರಂಜೀವಿ ಸಹೋದರ ಪುತ್ರನ ಬಗ್ಗೆ ಸಕರಾತ್ಮ ಮಾಹಿತಿವೊಂದನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ನಟ, ''ತಮ್ಮನ ಪುತ್ರ ಮಾರ್ಕ್ ಶಂಕರ್ ಗುಣಮುಖನಾಗಿದ್ದಾನೆ'' ಎಂದು ಹೇಳಿದ್ದಾರೆ.
"ನಮ್ಮ ಮಗು ಮಾರ್ಕ್ ಶಂಕರ್ ಮನೆಗೆ ಬಂದಿದ್ದಾನೆ. ಆದರೆ ಅವನು ಇನ್ನೂ ಚೇತರಿಸಿಕೊಳ್ಳಬೇಕಾಗಿದೆ. ನಮ್ಮ ಕುಲದೇವತೆ ಆಂಜನೇಯ ಸ್ವಾಮಿಯ ಕೃಪೆ ಮತ್ತು ಕರುಣೆಯಿಂದ, ಅವನು ಶೀಘ್ರದಲ್ಲೇ ಸಂಪೂರ್ಣವಾಗಿ ಆರೋಗ್ಯವಾಗುತ್ತಾನೆ ಮತ್ತು ಸಹಜ ಸ್ಥಿತಿಗೆ ಮರಳುತ್ತಾನೆ. ನಾಳೆ ಹನುಮಾನ್ ಜಯಂತಿ, ಮತ್ತು ಆ ಭಗವಂತ ನಮ್ಮೊಂದಿಗೆ ನಿಂತು ಆ ಪುಟ್ಟ ಮಗುವನ್ನು ದೊಡ್ಡ ಅಪಾಯ ಮತ್ತು ದುರಂತದಿಂದ ರಕ್ಷಿಸಿದನು" ಎಂದು ಬರೆದುಕೊಂಡಿದ್ದಾರೆ.
ಇನ್ನು ಏ.8ರಂದು ನಡೆದ ಈ ಘಟನೆಯಲ್ಲಿ ಮಾರ್ಕ್ ಶಂಕರ್‌ಗೆ ಕೈ ಮತ್ತು ಕಾಲುಗಳಿಗೆ ತೀವ್ರ ಪ್ರಮಾಣದಲ್ಲಿ ಸುಟ್ಟಗಾಯಗಳಾಗಿವೆ. ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.(ಏಜೆನ್ಸೀಸ್)