

ಆಂಧ್ರಪ್ರದೇಶ: ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಬ್ರೋ' ಚಿತ್ರ ಇದೀಗ ಬಿಡುಗಡೆಗೊಂಡಿದ್ದು, ಚಿತ್ರ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರೆ. ಈ ವೇಳೆ ಕೆಲವರು ಚಿತ್ರ ಪ್ರದರ್ಶನಗೊಳ್ಳುವ ಸ್ಕ್ರೀನ್ ಮೇಲೆ ಹಾಲಿನ ಅಭಿಷೇಕ ಮಾಡುವ ಮುಖೇನ ಪರದೆಯನ್ನು ಹಾನಿಗೊಳಿಸಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ದೊಡ್ಡ ಸ್ಟಾರ್ಗಳ ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ ಎಂದ ಕೂಡಲೇ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಅಥವಾ ನಟಿಯ ಪೋಸ್ಟರ್ಗೆ ಹಾಲಿನ ಅಭಿಷೇಕ ಮಾಡುವುದು, ಜೈಕಾರ ಕೂಗುವುದು, ಹೂವಿನಿಂದ ಅಲಂಕಾರ ಮಾಡುವುದು ಸಾಮಾನ್ಯ. ಅದರಂತೆಯೇ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಚಿತ್ರ ಬ್ರೋ ಸಿನಿಮಾವನ್ನು ಸಂಭ್ರಮಿಸಲು ಹೋಗಿ ಎಟವಟ್ಟು ಮಾಡಿಕೊಂಡಿರುವ ಫ್ಯಾನ್ಸ್ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಸೌಂದರ್ಯ ಥಿಯೇಟರ್ನಲ್ಲಿ ಪ್ರದರ್ಶನವಾಗುತ್ತಿದ್ದ ಬ್ರೋ ಚಿತ್ರದ ಮಧ್ಯೆ ತಮ್ಮ ಹುಚ್ಚಾಟ ಮೆರೆದ ಅಭಿಮಾನಿಗಳು, ಚಿತ್ರಮಂದಿರದ ಸ್ಕ್ರೀನ್ ಮೇಲೆ ಹಾಲನ್ನು ಸುರಿದು ಹಾನಿಗೊಳಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).