ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಿ; ಸಂಸದ ಬಿ.ವೈ.ರಾಘವೇಂದ್ರಗೆ ಮನವಿ

29 smg 1
ರೈಲ್ವೆ ನಿಲ್ದಾಣ ಸಮೀಪ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು. ವಾಟಾಳ್ ಮಂಜುನಾಥ್, ನಿತಿನ್ ರೆಡ್ಡಿ, ಸತೀಶ್ ಗೌಡ, ಆಲ್ಬರ್ಟ್ ವಿಜಯ್ ಇತರರಿದ್ದರು.
Published on

ಶಿವಮೊಗ್ಗ: ರೈಲ್ವೆ ನಿಲ್ದಾಣ ಸಮೀಪದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕೆಂದು ಒತ್ತಾಯಿಸಿ ಶನಿವಾರ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಕಚೇರಿಯಲ್ಲಿ ರಾಘವೇಂದ್ರ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಸಂಗೊಳ್ಳಿ ರಾಯಣ್ಣ ವೃತ್ತ ಹಲವು ವರ್ಷಗಳಿಂದಲೂ ಇದ್ದು, ರಾಯಣ್ಣನ ಪ್ರತಿಮೆ ಮಾತ್ರ ಇಲ್ಲ ಎಂದು ದೂರಿದರು.
ಈಗ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿಯವರು ಕೆಲ ದಿನಗಳ ಹಿಂದೆ ವೃತ್ತದಲ್ಲಿ ಕತ್ತಿ ಮತ್ತು ಗುರಾಣಿಯ ಪ್ರತಿಕೃತಿ ಇಟ್ಟಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಇದು ಯಾವ ಕಾಲದ ರಾಜನದ್ದು ಎಂಬುದೂ ತಿಳಿದಿಲ್ಲ. ಆದ್ದರಿಂದ ಕತ್ತಿ-ಗುರಾಣಿ ತೆರವುಗೊಳಿಸಿ ಕಿತ್ತೂರು ಸಂಸ್ಥಾನದಲ್ಲಿ ಕನ್ನಡ ನಾಡಿನ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಪ್ರಾಣವನ್ನೇ ಅರ್ಪಿಸಿದ ಮಹಾನ್ ವೀರ ಸೇನಾನಿ ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ್, ಪ್ರಮುಖರಾದ ನಿತಿನ್ ರೆಡ್ಡಿ, ಸತೀಶ್ ಗೌಡ, ಆಲ್ಬರ್ಟ್, ಅಕ್ಬರ್ ಪಾಷಾ, ಲೋಕೇಶ್, ಪರಮೇಶ್, ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net