

ಆಂಧ್ರಪ್ರದೇಶ: ಟಾಲಿವುಡ್ನ ಪವರ್ ಸ್ಟಾರ್, ನಟ ಪವನ್ ಕಲ್ಯಾಣ್ ಅವರ ಸಹಸ್ರಾರು ಅಭಿಮಾನಿಗಳಿಗೆ ಸೆಪ್ಟಂಬರ್ 02 ಬಹಳ ವಿಶೇಷ ದಿನ. ಪ್ರತಿವರ್ಷವೂ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ, ಭರ್ಜರಿ ಸಂಭ್ರಮಾಚರಣೆ ಮಾಡಲು ಕಾತರದಿಂದ ಕಾಯುವ ಫ್ಯಾನ್ಸ್ಗೆ ಈ ವರ್ಷ ಅದ್ದೂರಿಯಾಗಿರಲಿದೆ.
ಇದನ್ನೂ ಓದಿ: ವಿಶ್ವಶಾಂತಿಗಾಗಿ ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ
ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಚಿತ್ರಗಳ ಚಿತ್ರತಂಡದಿಂದ ಹೊಸ ಮಾಹಿತಿಗಳು ಜನ್ಮದಿನದ ಉಡುಗೊರೆಯಾಗಿ ಬರಲಿದೆ. ಸುಜೀತ್ ನಿರ್ದೇಶನದ ಗ್ಯಾಂಗ್ಸ್ಟರ್ ಸಿನಿಮಾ ಎಂದು ಹೇಳಲಾದ 'ಓಜಿ' ಟೀಸರ್ ಅನ್ನು ನಟನ ಹುಟ್ಟುಹಬ್ಬದಂದು ರಿಲೀಸ್ ಮಾಡಲು ಚಿತ್ರತಂಡ ತಯಾರಾಗಿದ್ದು, ಈ ಮುಖೇನ ಅಭಿಮಾನಿಗಳ ಆಸೆಯನ್ನು ಈಡೇರಿಸಿ, ಯೂಟ್ಯೂಬ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಲು ಸಜ್ಜಾಗಿದೆ.
ಪವನ್ ಕಲ್ಯಾಣ್ ಅಭಿನಯದ 'ಹರಿಹರ ವೀರ ಮಲ್ಲು' ಚಿತ್ರದ ತಯಾರಕರು ನಟನ ಅದ್ಭುತ ಮತ್ತು ಬೃಹತ್ ಪೋಸ್ಟರ್ ಅನ್ನು ಸೆ.02ರ 12:17ಕ್ಕೆ ಅನಾವರಣಗೊಳಿಸಲಿದ್ದಾರೆ. ಈ ಬಗ್ಗೆ ಪವರ್ ಸ್ಟಾರ್ ಅಭಿಮಾನಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಇದರ ಬೆನ್ನಲ್ಲೇ 'ಉಸ್ತಾದ್ ಭಗತ್ ಸಿಂಗ್' ಚಿತ್ರತಂಡ ಕೂಡ ಹೊಚ್ಚ ಹೊಸ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಮೂಲಕ ಪವನ್ ಕಲ್ಯಾಣ್ ಜನ್ಮದಿನಕ್ಕೆ ಫ್ಯಾನ್ಸ್ಗೆ ಮೂರು ಸಿಹಿ ಸುದ್ದಿಯನ್ನು ಆಯಾ ಸಿನಿಮಾ ತಂಡಗಳು ನೀಡಲು ಸಜ್ಜಾಗಿರುವುದು ವಿಶೇಷ,(ಏಜೆನ್ಸೀಸ್).