ಟಾಲಿವುಡ್‌ನಲ್ಲಿ ರೀಲೀಸ್​ ಟ್ರೆಂಡ್: 'ಮುರಾರಿ' ಕಲೆಕ್ಷನ್ ಬ್ರೇಕ್​ ಮಾಡಿ ಅಬ್ಬರಿಸುತ್ತಿರುವ 'ಗಬ್ಬರ್​ಸಿಂಗ್'!

gabbar singh
Published on

ಹೈದರಾಬಾದ್​: ಟಾಲಿವುಡ್ ನಲ್ಲಿ ಸದ್ಯ ಚಿತ್ರಗಳ ರೀರಿಲೀಸ್ ಟ್ರೆಂಡ್ ಮುಂದುವರೆದಿದ್ದು, ಸ್ಟಾರ್ ಹೀರೋಗಳ ಹಳೆಯ ಸಿನಿಮಾಗಳು ಮತ್ತೆ ಥಿಯೇಟರ್ ನಲ್ಲಿ ಸದ್ದು ಮಾಡುತ್ತಿವೆ. ಬಾಕ್ಸ್​ ಆಫೀಸ್​ನಲ್ಲಿ ಹೊಸ ಸಿನಿಮಾ ಬಿಡುಗಡೆ ಮಾಡಿದಂತೆಯೇ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆಯುತ್ತಿವೆ.

ತೆಲುಗು ಚಿತ್ರರಂಗದಿಂದ ಒಂದೆಡೆ ಭಾರಿ ಬ್ಲಾಕ್ ಬಸ್ಟರ್ ಸಿನಿಮಾಗಳು ಬರುತ್ತಿದ್ದರೆ, ಇನ್ನೊಂದೆಡೆ ಸ್ಟಾರ್ ಹೀರೋಗಳ ಸೂಪರ್ ಹಿಟ್ ಸಿನಿಮಾಗಳು ಆಗುತ್ತಾ ಮತ್ತೊಮ್ಮೆ ಸದ್ದು ಮಾಡುತ್ತಿವೆ. ಬಾಲಿವುಡ್‌ನಲ್ಲಿಯೂ ನಾವು ಕಾಲಕಾಲಕ್ಕೆ ರೀ-ರಿಲೀಸ್‌ಗಳನ್ನು ನೋಡುತ್ತಿದ್ದೇವೆ. ಆದರೆ ಅದಕ್ಕಿಂತ ಹೆಚ್ಚಾಗಿ ತೆಲುಗು ರಾಜ್ಯಗಳಲ್ಲಿ ರೀ ರಿಲೀಸ್ ಸಿನಿಮಾಗಳು ದಾಖಲೆ ಕಲೆಕ್ಷನ್ ಮಾಡುತ್ತಿವೆ.

ಬಾಲಿವುಡ್​ನಂತೆಯೇ ತೆಲುಗು ಚಿತ್ರರಂಗದಲ್ಲೂ ಮಹೇಶ್ ಬಾಬು ಹುಟ್ಟುಹಬ್ಬದ ಸಂದರ್ಭದಲ್ಲಿ ರೀರಿಲೀಸ್ ಆದ ಮುರಾರಿಗೆ ಒಳ್ಳೇಯ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸ್ ಆಫೀಸ್​ನಲ್ಲಿ 5.5 ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರ ಮಹೇಶ್ ಬಾಬು ಅವರ ಈ ಹಿಂದೆ ಮರು ಬಿಡುಗಡೆಯಾದ ಚಿತ್ರಗಳ ದಾಖಲೆಗಳನ್ನು ಮುರಿದಿದೆ.

ಇನ್ನು ಪವನ್ ಕಲ್ಯಾಣ್ ಹುಟ್ಟುಹಬ್ಬ(ಸೆ.2)ಕ್ಕೆ ರೀರಿಲೀಸ್​ ಆದ ಗಬ್ಬರ್ ಸಿಂಗ್ ಧೂಳೆಬ್ಬಿಸುತ್ತಿದೆ. ಉಭಯ ತೆಲುಗು ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದ್ದರೂ, ಬಾಕ್ಸ್ ಆಫೀಸ್ ನಲ್ಲಿ 8.5 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಈ ಬಾರಿ ಮುರಾರಿ ಕಲೆಕ್ಷನ್​ ದಾಖಲೆಯಾಗುತ್ತದೆ. ಇದನ್ನು ಬ್ರೇಕ್ ಮಾಡಲು ಯಾವ ಸಿನಿಮಾದಿಂದಲೂ ಸಾಧ್ಯವಾಗದು ಎಂದು ಮಹೇಶ್​ ಅಭಿಮಾನಿಗಳು ಭಾವಿಸಿದ್ದರಾದರೂ, ​ಗಬ್ಬರ್ ಸಿಂಗ್ ಅಬ್ಬರ ಕಂಡು ಹೌಹಾರುತ್ತಿದ್ದಾರೆ. ಮಳೆ ಅಬ್ಬರ ಕಡಿಮೆಯಾದರೆ ಗಬ್ಬರ್​ ಅಬ್ಬರ ಜೋರಾಗಲಿದೆ ಎಂದು ಪವನ್​ ಅಭಿಮಾನಿಗಳು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net