ಬೆಂಗಳೂರು: ವಿಶ್ವದ ಕೆಲವೇ ಸ್ಥಳಗಳಲ್ಲಿ ವಾಸಿಸುವ ಅಪರೂಪದ ಜೀವಿಗಳು ಹನಿ ಬ್ಯಾಡ್ಜರ್. ಸಣ್ಣ ಕರಡಿಗಳನ್ನು ಹೋಲುವ ಇವು ಕೇವಲ 12 ಇಂಚು ಎತ್ತರವಿದ್ದು, ಜೇನು ತುಪ್ಪ ಇಷ್ಟಪಡುತ್ತವೆ. ಇದರ ಜೊತೆಗೆ ಕೀಟ, ಹಾವುಗಳು ಮತ್ತು ಮೊಲಗಳನ್ನು ಸಹ ತಿನ್ನುತ್ತವೆ. ಆದರೆ ಇದೆಲ್ಲಕ್ಕಿಂತ ಕಾದಾಟ ಮತ್ತು ಪೌರುಷದಲ್ಲಿ ಇವುಗಳಿಗೆ ಸಾಟಿಯಾದ ಪ್ರಾಣಿ ಮತ್ತೊಂದಿಲ್ಲ ಎಂದೇ ಹೇಳಬೇಕು. ಕಾಡಿನಲ್ಲಿ ತಮ್ಮನ್ನು ಹಿಡಿಯಲು ಬಂದ 7ಸಿಂಹಗಳನ್ನು ಎರಡು ಹನಿ ಬ್ಯಾಡ್ಜರ್ ಎದುರಿಸಿದ್ದು, ಇವುಗಳ ದೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಆಗಿದೆ.
ಇದನ್ನೂ ಓದಿ: ದೃಷ್ಟಿ ತೆಗೆದ ವಸ್ತುಗಳನ್ನು ರಸ್ತೆಗೆ ಎಸೆದರೆಂದು ಮೂವರಿಗೆ ಥಳಿಸಿ ಹಳ್ಳಿಯಿಂದ ಹೊರಹಾಕಿದ ಜನ..ಬಳಿಕ ನಡೆದಿದ್ದೇ ಬೇರೆ..!
ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಎರಡು ಹನಿ ಬ್ಯಾಡ್ಜರ್ ತಮ್ಮನ್ನು ಹಿಡಿಯಲು ಬಂದ ಏಳು ಸಿಂಹಗಳ ಮೇಲೆ ಮುಗಿ ಬಿದ್ದು, ಹಿಮ್ಮೆಟ್ಟಿಸುತ್ತವೆ. ಒಂದನ್ನು ಸಿಂಹ ಇನ್ನೇನು ಹಿಡಿಯಿತು ಎಂಬುವಷ್ಟರಲ್ಲಿ ಅದು ತಪ್ಪಿಸಿಕೊಳ್ಳುತ್ತದೆ. ಇದೇ ಸಂದರ್ಭದಲ್ಲಿ ಮುಂದೆ ಹೋಗಿದ್ದ ಮತ್ತೊಂದು ಹನಿ ಬ್ಯಾಡ್ಜರ್ ಹಿಂದೆ ಬಂದು ಸಿಂಹವನ್ನು ಓಡಿಸುತ್ತದೆ. ಈ ರಣರೋಚಕ ವೀಡಿಯೋವನ್ನು ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು ನೆಟ್ಟಿಗರು ಭಲೇ ಹನಿ ಬ್ಯಾಡ್ಜರ್ ಎಂದು ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಧೈರ್ಯಂ ಸರ್ವತ್ರ ಸಾಧನಂ ಎಂದು ಕಾಮೆಂಟ್ಸ್ ಹಾಕುತ್ತಿದ್ದಾರೆ.
ಕಾಡಿನಲ್ಲಿ ಸಿಂಹ, ಹುಲಿಗಳಂತಹ ಮೃಗಗಳೂ, ಕರಡಿ, ತೋಳ ಮತ್ತು ಆನೆಗಳು ಸಹ ಈ ಹನಿ ಬ್ಯಾಡ್ಜರ್ಗಳ ತಂಟೆಗೆ ಹೋಗುವುದಿಲ್ಲ. ದಪ್ಪ ಚರ್ಮ ಹೊಂದಿರುವ ಇವು ಹಾವುಗಳಿಗೂ ಭಯಪಡುವುದಿಲ್ಲ.
ತೆಲುಗು ರಾಜ್ಯಗಳಲ್ಲಿ ಪ್ರವಾಹ.. ಕೋಟಿ ದೇಣಿಗೆ ನೀಡಿದ ಮೆಗಾಸ್ಟಾರ್ ಚಿರಂಜೀವಿ