

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಇದೀಗ ಮತ್ತೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳಿಸಲಾಗಿದ್ದು, ಜೂನ್ 20ರವರೆಗೂ ಕಸ್ಟಡಿಯಲು ಇರಿಸುವಂತೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ನಟ ದರ್ಶನ್ ಮತ್ತು ಗ್ಯಾಂಗ್ ಅನ್ನು ಪೊಲೀಸರ ಸರ್ಪಗಾವಲಿನಲ್ಲಿ ಕೋರ್ಟ್ನಿಂದ ಹೊರೆಗೆ ಕರೆದುಕೊಂಡು ಬರುವ ವೇಳೆ ದರ್ಶನ್ ಮುಂದೆಯೇ ಬಂದ ಆರೋಪಿ ಪವಿತ್ರಾ ಗೌಡ, ಮಾಧ್ಯಮಗಳ ಕ್ಯಾಮರಾಗಳು ತನ್ನನ್ನು ಸೆರೆಹಿಡಿಯುತ್ತಿರುವುದನ್ನು ಗಮನಿಸಿ, ಮುಖವನ್ನು ದುಪ್ಪಟ್ಟದಿಂದ ಮರೆಮಾಚಿಕೊಂಡು ಪೊಲೀಸ್ ವ್ಯಾನ್ ಹತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.