ಬಿಗ್​​​​ ಬಾಸ್​ಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಬೆನ್ನಲ್ಲೇ, ಮಾಡೆಲ್‌ ಪವಿ ಪೂವಪ್ಪ ಹಾಟ್​​ ಪೋಟೋಸ್​​ ವೈರಲ್..!

pprrrr
Published on

ಬಿಗ್​​ ಬಾಸ್​​ ಎಂಟ್ರಿ ಬೆನ್ನಲ್ಲೇ ಸೀಸನ್​ 10 ರ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್​​​​ ಆಗಿ ಸ್ಪರ್ಧಿಸುತ್ತಿರುವ ಪವಿ ಪೂವಪ್ಪ ಅವರ ಹಾಟ್​​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಾ ಇದೆ.

ಮಾಡೆಲಿಂಗ್ ಜಗತ್ತಿನಿಂದ ರಿಯಾಲಿಟಿ ಶೋಗೆ ಕಾಲಿಟ್ಟಂತಹ ಪವಿ ಅವರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಪವಿ ಪೂವಪ್ಪ ಹಾಟ್​​ ಫೋಟೋಗಳಿಗೆ ಜನ ನಾನಾ ಕಾಮೆಂಟ್​​ಗಳನ್ನ ಮಾಡುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಈಗ ಇಬ್ಬರು ಸ್ಪರ್ಧಿಗಳು ದೊಡ್ಮನೆಯೊಳಗಡೆ ಕಾಲಿಟ್ಟಿದ್ದಾರೆ. ಅವರಲ್ಲಿ ಒಬ್ಬರಾಗಿರುವ ಪವಿ ಪೂವಪ್ಪ, 2013ರ ರಿಂದ ಮಾಡಲಿಂಗ್​​ ಕ್ಷೇತ್ರದಲ್ಲಿದ್ದಾರೆ.

ಪವಿ ಪೂವಪ್ಪ ಪೋಟೋಸ್​ಗೆ ಜನ ನಾನಾ ಕಾಮೆಂಟ್​ಗಳನ್ನ ಮಾಡುತ್ತಿದ್ದು, 1500ಕ್ಕೂ ಅಧಿಕ ಶೋಗಳನ್ನು ಮಾಡಿರುವ ಮಾಡೆಲ್​ ಪವಿ ಪೂವಪ್ಪ.

ಬಿಗ್​ಬಾಸ್​ ಮನೆಯಲ್ಲಿ ಸದ್ಯ ಬಿಗ್​ಬಾಸ್​​ ಮನೆಯಲ್ಲಿ ನಡೆದ ನೀರೆರಚುವ ಟಾಸ್ಕ್​​​​ನಲ್ಲಿ ಸಖತ್ತಾಗಿ ಪರ್ಫಾರ್ಮ್​​​ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಪ್ಯಾಶನ್‌ ಲೋಕದಲ್ಲಿ ಮಿಂಚುತ್ತಿರುವ ಬೆಡಗಿ ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

ಪವಿ ಪೂವಪ್ಪ ಪೂರ್ಣ ಹೆಸರು, ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್​​​ ಕ್ಷೇತ್ರಕ್ಕೆ ಕಾಲಿಟ್ಟ ನಂತರದಲ್ಲಿ ಪವಿ ತಮ್ಮ ಹೆಸರನ್ನ ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net