ಪೌರ ಕಾಮಿರ್ಕರ ಸೇವೆ ಅನನ್ಯವಾದದ್ದು; ಮಲ್ಲಣ್ಣ ಅಂಗಡಿ

oplus_2
oplus_2
Published on

ರಾಣೆಬೆನ್ನೂರ: ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಪೌರ ಕಾಮಿರ್ಕರ ಸೇವೆ ಅನನ್ಯವಾಗಿದೆ. ಅಂಥವರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನಾನಾ ಯೋಜನೆಗಳಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಹೇಳಿದರು.
ನಗರದ ವರ್ತಕರ ಸಮುದಾಯ ಭವನದಲ್ಲಿ ನಗರಸಭೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪೌರ ಕಾಮಿರ್ಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೌರ ಕಾಮಿರ್ಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಅಂದಾಗ ಸಮಾಜದಲ್ಲಿ ಅವರು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ ಎಂದರು.
ನಗರಸಭೆ ಆಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ಭಾರತ ಸ್ವಚ್ಛವಾಗಿದೆ ಎಂದರೆ ಅದಕ್ಕೆ ಪೌರ ಕಾಮಿರ್ಕರ ಶ್ರಮ ಮುಖ್ಯವಾಗಿದೆ. ಸರ್ಕಾರದಿಂದ ಪೌರ ಕಾಮಿರ್ಕರ ಹಲವು ಸೌಲಭ್ಯಗಳಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಕಸಮುಕ್ತ, ದೂಳು ಮುಕ್ತ ಮಾಡುವಲ್ಲಿ ಪೌರ ಕಾಮಿರ್ಕರ ಪಾತ್ರ ಮಹತ್ವದಿದೆ ಎಂದರು.
ಪೌರ ಕಾಮಿರ್ಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಹಿರಿಯ ಪೌರ ಕಾಮಿರ್ಕರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ಜಯಶ್ರೀ ಪಿಸೆ, ಶೇಖಪ್ಪ ಹೊಸಗೌಡ್ರ, ಮೈಲಪ್ಪ ದಾಸಪ್ಪನವರ, ಪೌರ ಕಾಮಿರ್ಕರಾದ ನೀಲಪ್ಪ ಬಾಳಪ್ಪನವರ, ಮಾಳವ್ವ ಹಲವಾಗಿಲ, ಲಲಿತಮ್ಮ ಆರಿಕಟ್ಟಿ, ಮಲ್ಲೇಶಪ್ಪ ಮೆಣಸಿನಹಾಳ, ಏಳುಕೋಟೆಪ್ಪ ಗೋಣಿಬಸಮ್ಮನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net