

ಬೆಂಗಳೂರು: ಈ ಕ್ರೈಸ್ತ ಧರ್ಮಗುರು ಯುವತಿಯೊಂದಿಗೆ ಅನೇಕ ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ. ಅದರ ಫೋಟೋ ವಿಡಿಯೋಗಳು ಲೀಕ್ ಆಗುತ್ತಿದ್ದಂತೆಯೇ ಈತ ಊರು ಬಿಟ್ಟು ಪರಾರಿಯಾಗಿದ್ದ. ಈತ ಇದೀಗ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ಈ ಯುವ ಪಾದ್ರಿ ತಮಿಳುನಾಡಿನ ಕನ್ಯಾಕುಮಾರಿ ಬಳಿಯ ತಾಕಳಾ ಚರ್ಚ್ಗೆ ಸಂಬಂಧಿಸಿದ ವ್ಯಕ್ತಿಯಾಗಿದ್ದು ಈತನ ಹೆಸರು ಬೆನ್ಡಿಕ್ಟ್ ಆಂಟೋ ಎಂದು. ಈತನ ಸ್ನೇಹಿತನಾದ ಆಸ್ಟಿನ್ ಎನ್ನುವಾತ ಬೆನ್ಡಿಕ್ಟ್ ಹಾಗೂ ಯುವತಿ ಓರ್ವಳು ಖಾಸಗಿ ಕ್ಷಣಗಳನ್ನು ಹಂಚಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದ. ಈ ಘಟನೆಯಿಂದಾಗಿ ನೊಂದ ಯುವತಿ ನಾಗರ್ಕೋಯಿಲ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಈ ಯುವ ಪಾದ್ರಿ ಊರು ಬಿಟ್ಟು ತಲೆಮರೆಸಿಕೊಂಡಿದ್ದು ಬೆಂಗಳೂರಿನಲ್ಲಿ ಬಂಧಿಸಿದ್ದು ಕನ್ಯಾಕುಮಾರಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)