ರಾಜ್ಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಟಿಫಿನ್​ ಬಾಕ್ಸ್​, ಫುಡ್​ ಕಿಟ್​ ಹಂಚಿಕೆ, ಬಾಡೂಟ ಆಯೋಜನೆ!

WhatsApp Image 2023-03-20 at 8.24.57 AM
Published on

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಣ ರಂಗೇರಲು ಪ್ರಾರಂಭಿಸಿದ್ದು ಅನೇಕ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಇದೀಗ ರಾಜ್ಯದ ಹಲವೆಡೆ ಆಹಾರ ಪೊಟ್ಟಣ, ಬಾಡೂಟ ಮೂಲಕ ಜನರನ್ನು ಗೆಲ್ಲಲು ನಾಯಕರು ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಒಟ್ಟು ಮೂರು ಪ್ರಕರಣಗಳು ಬೆಳಕಿಗೆ ಬಂದಿದ್ದು ಎರಡು ನಡೆದದ್ದು ಬೆಳಗಾವಿಯಲ್ಲೇ.

ಕೋಲಾರ

ಹಬ್ಬದ ಪ್ರಯುಕ್ತ ಹಂಚಲು ತರುತ್ತಿದ್ದ ಪುಡ್ ಕಿಟ್​ಗಳು ಕೋಲಾರ ತಾಲೂಕಿನ ವೇಮುಗಲ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಅನುಮಾನಾಸ್ಪದವಾದ ಫುಡ್​ ಕಿಟ್​ಗಳು ಕಂಡುಬಂದಿದ್ದು ಈ ಪ್ರಕರಣ ಚುನಾವಣೆಗೆ ಸಂಬಂಧಿಸಿದ್ದು ಎಂದು ತಿಳಿದ ಕೂಡಲೆ ಎಲ್ಲಾ ಕಿಟ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಫುಡ್​ ಕಿಟ್​ಗಳು ಬೆಂಗಳೂರಿನಿಂದ ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮಕ್ಕೆ ಬರುತ್ತಿದ್ದವು ಎನ್ನಲಾಗಿದೆ. ಇವನ್ನು ರಂಜಾನ್ ಹಬ್ಬದ ಪ್ರಯುಕ್ತ ಹಂಚಲು ತರುತ್ತಿದ್ದರು ಎನ್ನಲಾಗಿದ್ದು ಆಹಾರ ಸಾಮಗ್ರಿಗಳಿದ್ದ ಟೆಂಪೋ ವೇಮುಗಲ್​ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ‌; ಪ್ರಕರಣ 1

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಖಾನಾಪೂರದ ಲೈಲಾ ಶುಗರ್ಸ್ ಆವರಣದಲ್ಲಿ ಬಾಡೂಟ ಆಯೋಜನೆ ಮಾಡಲಾಗಿತ್ತು. ಬಿಜೆಪಿ ಟಿಕೆಟ್ ಆಕಾಂಕ್ಷಿ ವಿಠ್ಠಲ ಹಲಗೇಕರ್ ಬಾಡೂಟ ಆಯೋಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣ ಖಾನಾಪೂರ ತಹಶೀಲ್ದಾರ ನೇತೃತ್ವದಲ್ಲಿ ಅಧಿಕಾರಿಗಳು ನಿನ್ನೆ ರಾತ್ರಿ ಕಾರ್ಖಾನೆ ಮೇಲೆ ದಾಳಿ ನಡೆಸಿದ್ದ ಸಂದರ್ಭ ಬೆಳಕಿಗೆ ಬಂದಿದೆ. ಈ ಸಂದರ್ಭ ಮತದಾರರಿಗೆ ಬಾಡೂಟಕ್ಕಾಗಿ ಸಿದ್ಧಪಡಿಸಿ 25ಕೆಜಿ ಚಿಕನ್, ಅನ್ನ, ಸಾಂಬರ್, ಪಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಆಮಿಶ ಒಡ್ಡಿದ್ದಕ್ಕಾಗಿ ಖಾನಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳಗಾವಿ‌; ಪ್ರಕರಣ 2

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕುದ್ರೆಮನಿ ಗ್ರಾಮದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಟಿಫಿನ್ ಬಾಕ್ಸ್‌ಗಳ ಜಪ್ತಿ ಮಾಡಲಾಗಿದೆ. ಮತದಾರರಿಗೆ ಗಿಪ್ಟ್ ಕೊಡಲು ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಟಿಫಿನ್ ಬಾಕ್ಸ್‌ಗಳು ವಶಕ್ಕೆ ಬಂದಿವೆ.

ರಮೇಶ್ ಜಾರಕಿಹೊಳಿ ಆಪ್ತ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಇರುವ ಟಿಫಿನ್ ಬಾಕ್ಸ್‌ಗಳು ಕುದ್ರೆಮನಿ ಗ್ರಾಮದಲ್ಲಿ ಪತ್ತೆಯಾಗಿವೆ. ಈ ಸಂದರ್ಭ ಅಧಿಕಾರಿಗಳು ಸಾವಿರಾರು ಟಿಫಿನ್ ಬಾಕ್ಸ್‌ಗಳ ಜಪ್ತಿ ಮಾಡಿಕೊಂಡಿದ್ದಾರೆ. ಇದೀಗ ಟಿಫಿನ್​ ಬಾಕ್ಸ್​ ಹಂಚಲು ಪ್ರಯತ್ನಿಸಿದ್ದಕ್ಕಾಗಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net