ಲೋಕಲ್​ ರೈಲಿನಲ್ಲಿ ಯೋಗಾಭ್ಯಾಸ ಮಾಡಿದ ಪ್ರಯಾಣಿಕರು; ವಿಡಿಯೋ ವೈರಲ್​

Yoga Day
Published on

ಮುಂಬೈ: ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಯಾಣಿಕರು ಚಲಿಸುವ ರೈಲಿನಲ್ಲಿ ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸುಮಾರು 10-15 ಪ್ರಯಾಣಿಕರು ಮುಂಬೈ ಲೋಕಲ್​ ರೈಲಿನಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ವಿಭಿನ್ನವಾಗಿ ದಿನಾಚರಣೆಯನ್ನು ಆಚರಿಸಿದ್ಧಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದೆ.

ಮತ್ತೊಂದು ವೈರಲ್​ ವಿಡಿಯೋದಲ್ಲಿ ಪ್ರಯಾಣಿಕರು ಹಾಗೂ ರೈಲ್ವೆ ಇಲಾಖೆಯ ನೌಕರರು ನಿಲ್ದಾಣದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ದಿನಾಚರಣೆಯ ಮಹತ್ವವನ್ನು ಸಾರಿದ್ಧಾರೆ. ಊರ್ಧ್ವ ಹಸ್ತಾಸನ ಭಂಗಿಯನ್ನು ಪ್ರದರ್ಶಿಸಿದರು.

ಜೂನ್​ 21 ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಎಂದು ವಿಶ್ವ ಸಂಸ್ಥೆ ಘೋಷಿಸಿದೆ. ಈ ವರ್ಷದ ಯೋಗ ದಿನಾಚರಣೆಯನ್ನು ವಸುದೈವ ಕುಟುಂಬಕಂ ಥೀಮ್​ನಲ್ಲಿ ಆಚರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net