More

    ಯೋಗಾರೋಗ್ಯ: ತಾರೆಯರ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ ಆರೋಗ್ಯದ ಗುಟ್ಟು

    | ಹರ್ಷವರ್ಧನ್ ಬ್ಯಾಡನೂರ್

    ಯೋಗ ಇಂದು ಲಕ್ಷಾಂತರ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಯೋಗ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿಯೇ ಸಿನಿಮಾ ತಾರೆಯರೂ ಸಹ ಯೋಗಕ್ಕೆ ಶರಣಾಗಿದ್ದಾರೆ. ಇಂದು ವಿಶ್ವ ಯೋಗ ದಿನದ ಪ್ರಯುಕ್ತ ಸ್ಯಾಂಡಲ್‌ವುಡ್ ನಟಿಯರಾದ ನಿಶ್ವಿಕಾ ನಾಯ್ಡು ಮತ್ತು ಶುಭ್ರಾ ಅಯ್ಯಪ್ಪ ಯೋಗದ ಪ್ರಾಮುಖ್ಯತೆ ಕುರಿತು ವಿಜಯವಾಣಿ ಜತೆ ಮಾತನಾಡಿದ್ದಾರೆ.

    ನನ್ನ ಜೀವನಶೈಲಿಯ ಭಾಗ

    ಯೋಗಾರೋಗ್ಯ: ತಾರೆಯರ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ ಆರೋಗ್ಯದ ಗುಟ್ಟು

    ಕರೋನಾ ಲಾಕ್‌ಡೌನ್ ವೇಳೆ ಜಿಮ್‌ಗಳು ಬಂದ್ ಆಗಿದ್ದ ಕಾರಣ ನಟಿ ನಿಶ್ವಿಕಾ ನಾಯ್ಡು, ಮನೆಯಲ್ಲೇ ಯೋಗ ಮಾಡಲು ಪ್ರಾರಂಭಿಸಿದರಂತೆ. ಬಳಿಕ ಅವರು ಅದನ್ನು ಅವರಿಗೆ ಅದು ಜೀವನದ ಭಾಗವಾಗಿದೆ. ‘ಯಾವುದೇ ರೀತಿಯ ವ್ಯಾಯಾಮವಾಗಲಿ, ಪ್ರತಿಯೊಬ್ಬರಿಗೂ ಎಕ್ಸರ್ಸೈಸ್ ಮುಖ್ಯ. ಅದನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿದಿನ ವರ್ಕೌಟ್‌ಗೂ ಮುನ್ನ ಸ್ಟ್ರೆಚ್ ಮಾಡುವಾಗ ಯೋಗ ಮಾಡುತ್ತೇವೆ, ಅಥವಾ ವಾರಕ್ಕೆ ಮೂರು ದಿನ ಯೋಗ ಮಾಡುತ್ತೇನೆ. ಪ್ರತಿದಿನ 45 ನಿಮಿಷದಿಂದ ಒಂದು ತಾಸಿನವರೆಗೆ ಯಾವುದಾದರೂ ಒಂದು ವ್ಯಾಯಮ ಮಾಡಬೇಕು. ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ. ಸಣ್ಣ ಮಕ್ಕಳು ಹಾಗೂ ವಯಸ್ಸಾದವರು ಜಿಮ್‌ಗೆ ಹೋಗಲಾಗುವುದಿಲ್ಲ. ಆದರೆ, ಯೋಗ ಪ್ರಯಾಕ್ಟೀಸ್ ಮಾಡಬಹುದು. ವಿಶ್ವ ಯೋಗ ದಿನ ೋಷಣೆಯಾದಾಗಿನಿಂದ ಆ ಬಗ್ಗೆ ಎಲ್ಲೆಡೆ ಜಾಗೃತಿ ಹೆಚ್ಚಿದೆ. ಯೋಗದ ಪ್ರಾಮುಖ್ಯತೆ ಗೊತ್ತಾಗಿದೆ’ ಎಂದು ಹೇಳಿಕೊಳ್ಳುತ್ತಾರೆ ನಿಶ್ವಿಕಾ ನಾಯ್ಡು.

    ಯೋಗಾರೋಗ್ಯ: ತಾರೆಯರ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ ಆರೋಗ್ಯದ ಗುಟ್ಟು

    ನಮಗೆ ನಾವೇ ನೀಡುವ ಅತ್ಯುತ್ತಮ ಉಡುಗೊರೆ

    ಯೋಗಾರೋಗ್ಯ: ತಾರೆಯರ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ ಆರೋಗ್ಯದ ಗುಟ್ಟು

    ನಟಿ ಶುಭ್ರಾ ಅಯ್ಯಪ್ಪ ಕಳೆದ ಹತ್ತು ವರ್ಷಗಳಿಂದ ಯೋಗ ಮಾಡುತ್ತಿದ್ದಾರೆ. ‘ನನಗೇನೋ ಪ್ರತಿದಿನ ಯೋಗ ಮಾಡುವಾಸೆ. ಆದರೆ, ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಹೀಗಾಗಿ ವಾರಕ್ಕೆ ಐದು ದಿನವಾದರೂ ಯೋಗ ಮಾಡುತ್ತೇನೆ. ಅದರಿಂದ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿ ಬಾರಿ ಯೋಗ ಮಾಡುವಾಗಲೂ ನನ್ನಲ್ಲಿ ಖುಷಿ ಮೂಡುತ್ತದೆ. ಯೋಗ ನಮಗೆ ನಾವೇ ನೀಡುವ ಅತ್ಯುತ್ತಮ ಉಡುಗೊರೆ. ಎಂಟು ತಿಂಗಳ ಹಿಂದೆ ನಾನು ಅಮೆರಿಕ ತೆರಳಿದ್ದೆ. ಇಲ್ಲಿಗಿಂತಲೂ ಯೋಗ ಅಲ್ಲಿ ಹೆಚ್ಚು ಜನಪ್ರಿಯವಾಗಿದೆ. ಅಷ್ಟೊಂದು ಯೋಗ ತರಬೇತಿ ಕೇಂದ್ರಗಳಿವೆ. ನಾವೂ ಭಾರತದಲ್ಲಿ ಶಾಲೆಗಳಿಂದಲೇ ಯೋಗ ತರಗತಿ ಪ್ರಾರಂಭಿಸಬೇಕು. ಸಣ್ಣ ವಯಸ್ಸಿನಿಂದಲೇ ಯೋಗದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಸದ್ಯ ನಾನು ಇಟಲಿಯಲ್ಲಿದ್ದೇನೆ. ಇಂದು ವಿಶ್ವ ಯೋಗ ದಿನವಾದ ಕಾರಣ, ಇಲ್ಲೇ ಯೋಗ ಮಾಡಲಿದ್ದೇನೆ’ ಎನ್ನುತ್ತಾರೆ.

    ಯೋಗಾರೋಗ್ಯ: ತಾರೆಯರ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ ಆರೋಗ್ಯದ ಗುಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts