

ಕೆ.ಆರ್.ಸಾಗರ: ಗ್ರಾಮದ ಮೈಸೂರು ಮುಖ್ಯರಸ್ತೆಯ ಪಕ್ಕದಲ್ಲಿದ್ದ ಪಾಂಡುರಂಗ ಕ್ಲಿನಿಕ್‌ಗೆ ಭಾನುವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಪ್ಯಾಸೆಂಜರ್ ಆಟೋವೊಂದು ನುಗ್ಗಿದೆ.
ಕೆ.ಆರ್.ಸಾಗರ ಕಡೆಯಿಂದ ಬರುತ್ತಿದ್ದ ಆಟೋ ಗ್ರಾಮದ ಸಂತೆಮಾಳದ ಬಳಿ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯಿಂದ ಕೆಳಕ್ಕೆ ಚಲಿಸಿ ಪಕ್ಕದಲ್ಲಿದ್ದ ಪಾಂಡುರಂಗ ಕ್ಲಿನಿಕ್ ಒಳಗಡೆ ನುಗ್ಗಿದೆ. ಪರಿಣಾಮ ಕ್ಲಿನಿಕ್ ಮುಂಭಾಗದ ಗ್ಲಾಸ್ ಕ್ಯಾಬಿನ್ ಜಖಂಗೊಂಡಿದೆ. ವೈದ್ಯರ ಬಳಸುವ ಹಲವು ವಸ್ತುಗಳು ಹಾಳಾಗಿವೆ. ಆಟೋ ಮುಂಭಾಗ ಜಖಂಗೊಂಡಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಆಟೋ ಚಾಲಕ ಹಿನಕಲ್ ನಿವಾಸಿ ಮಹದೇವ ಸಣ್ಣಪುಟ್ಟ ಗಾಯಗೊಂಡಿದ್ದು , ಇಬ್ಬರು ಪ್ಯಾಸೆಂಜರ್ ಇದ್ದು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.