ಸಮಾಜ ಕಟ್ಟುವ ಕೆಲಸದಲ್ಲಿ ಭಾಗಿಯಾಗಿ

madivaala
ಸಾಗರದಲ್ಲಿ ಗುರುವೀರ ಮಡಿವಾಳ ನೌಕರರ ಸಂಘದಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಮಡಿವಾಳ ಸಮಾಜದ ಅಧ್ಯಕ್ಷ ಎಂ.ಎಸ್.ಕೊಟ್ರಪ್ಪ ಉದ್ಘಾಟಿಸಿದರು. ಕೆ.ಎಚ್.ದಿವಾಕರ್, ಎಂ.ಟಿ.ಮಹೇಶ್, ರಾಜಶೇಖರ್, ನಾಗಪ್ಪ ಇತರರಿದ್ದರು.
Published on

ಸಾಗರ: ನಮ್ಮದು ಸಣ್ಣ ಸಮಾಜವಾದರೂ ಸಾಧಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಮಡಿವಾಳ ಸಮಾಜ ತಾಲೂಕಿನಲ್ಲಿ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡು ವ್ಯವಸ್ಥಿತವಾಗಿ ಮುನ್ನಡೆದಿದೆ ಎಂದು ಮಡಿವಾಳ ಸಮಾಜದ ಅಧ್ಯಕ್ಷ ಎಂ.ಎಸ್.ಕೊಟ್ರಪ್ಪ ಹೇಳಿದರು.

ಸಾಗರದ ಮಡಿವಾಳ ಮಾಚಿ ಸಭಾಂಗಣದಲ್ಲಿ ಶ್ರೀ ಗುರುವೀರ ಮಡಿವಾಳ ನೌಕರರ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೌಕರರ ಸಂಘವು ಅನೇಕ ವರ್ಷಗಳಿಂದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ, ಸಾಧಕರನ್ನು ಸನ್ಮಾನಿಸುವ ಕೆಲಸ ಮಾಡುತ್ತಿದೆ. ಇಂತಹ ಚಟುವಟಿಕೆಗಳನ್ನು ಮಾಡುವುದರಿಂದ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಸಮಾಜ ಕಟ್ಟುವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.

ಮಡಿವಾಳ ಮಾಚಿದೇವರ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ಎಚ್.ದಿವಾಕರ್ ಮಾತನಾಡಿ, ತಾಲೂಕಿನ ಬೇರೆಬೇರೆ ಇಲಾಖೆಗಳಲ್ಲಿರುವ ನೌಕರರು ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಂಘದ ಸದಸ್ಯರಾಗಬೇಕು. ಸಂಕಟ ಬಂದಾಗ ಮಾತ್ರ ಸಮಾಜ, ಸಂಘವನ್ನು ನೆನಪಿಸಿಕೊಳ್ಳುವ ಪ್ರವೃತ್ತಿ ನಿಲ್ಲಬೇಕು. ಪ್ರತಿಭಾವಂತರು, ನಿವೃತ್ತರನ್ನು ಗೌರವಿಸುವುದು ನಮ್ಮ ಹೊಣೆ ಎಂದು ತಿಳಿಸಿದರು.

ರಮೇಶ್, ಮಂಜಪ್ಪ, ಚಂದ್ರಶೇಖರ್, ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಮಾಚಿದೇವರ ಕುರಿತು ಎಂ.ಟಿ.ಮಹೇಶ್ ಉಪನ್ಯಾಸ ನೀಡಿದರು. ಜಿಲ್ಲಾಧ್ಯಕ್ಷ ಮಧುಕುಮಾರ್, ರಾಜಶೇಖರ್, ನಾಗಪ್ಪ , ಎಲ್.ಟಿ.ಗವಿಯಪ್ಪ, ಹೇಮಂತ್, ಪ್ರವೀಣ್, ದಿವಾಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net