ಸೆಪ್ಟೆಂಬರ್​ 21ರಿಂದ ಶಾಲೆಗಳು ಭಾಗಶಃ ಪ್ರಾರಂಭ

Student
Published on

ಬೆಂಗಳೂರು: ಸೆಪ್ಟೆಂಬರ್ 21ರಿಂದ ಅನ್ವಯವಾಗುವಂತೆ 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಸ್ವ ಇಚ್ಛೆಯ ಆಧಾರದ ಮೇಲೆ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಿದೆ.

ಈ ಸಂಬಂಧ ಪ್ರಮಾಣಿತ ಕಾರ್ಯವಿಧಾನ (ಎಸ್ ಒಪಿ) ಬಿಡುಗಡೆ ಮಾಡಿದ್ದು, ಮಕ್ಕಳ ತಂದೆ-ತಾಯಿ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ.

ಇದಕ್ಕೆ ಸೆಪ್ಟೆಂಬರ್ 21ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಮಾದರಿ ಕಾರ್ಯವಿಧಾನ ಹೊರಡಿಸಲಿದೆ.

ಸೂಚನೆಗಳು:

  • ಕ್ರೀಡೆ, ಗುಂಪು ಗೂಡುವುದು, ಇತರ ಚಟುವಟಿಕೆಗೆ ಕಡ್ಡಾಯ ನಿಷೇಧ.
  • ಶಾಲೆ ಸ್ಯಾನಿಟೈಸ್ ಮಾಡಿರಬೇಕು
  • ಕ್ವಾರಂಟೈನ್ ಕೇಂದ್ರಗಳಾಗಿದ್ದ ಶಾಲೆಗಳನ್ನು ಮಾರ್ಗಸೂಚಿ ಅನ್ವಯ ಸ್ವಚ್ಛಗೊಳಿಸುವುದು
  • ಶೇಕಡ ಐವತ್ತರಷ್ಟು ಸಿಬ್ಬಂದಿ ಮಾತ್ರ ಬಳಸಬೇಕು
  • ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಂದರೆ ಮಾತ್ರ ಮಾರ್ಗದರ್ಶನ ಪಡೆಯಬಹುದು.
  • ಬಯೋ‌ಮೆಟ್ರಿಕ್ ಬಳಸುವಂತಿಲ್ಲ.
  • ಶಾಲೆಯಲ್ಲಿ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು.
  • ಶಾಲೆಗಳು ಸ್ಥಳೀಯ ಆರೋಗ್ಯ ಕೇಂದ್ರದ ಹೆಲ್ಪ್ ಲೈನ್ ಪ್ರಕಟಿಸಬೇಕು
  • ಗರ್ಭಿಣಿಯರು, ಹಿರಿಯ ಸಿಬ್ಬಂದಿಯನ್ನು ಶಾಲೆಯಲ್ಲಿ ವಿದ್ಯಾರ್ಥಿಗಳ‌ನೇರ ಸಂಪರ್ಕದ ಚಟುವಟಿಕೆಗೆ ಬಳಸಿಕೊಳ್ಳುವಂತಿಲ್ಲ.
  • ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯ
  • ಶಾಲಾ ಆಡಳಿತ ಮಂಡಳಿಗಳೇ ವಾಹನ ವ್ಯವಸ್ಥೆ ಮಾಡಿರಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net